Chintamani : ಚಿಂತಾಮಣಿ-ಬೆಂಗಳೂರು ರಸ್ತೆ ಚಿನ್ನಸಂದ್ರ ಸಮೀಪ ಬುಧವಾರ ರಾತ್ರಿ ಸರ್ಕಾರಿ ಬಸ್ (KSRTC Bus) ಮತ್ತು ಖಾಸಗಿ ಮಿನಿ ಬಸ್ (Mini Bus) ಮುಖಾಮುಖಿಯಾಗಿ ಡಿಕ್ಕಿಯಾಗಿ (Accident) ಮಿನಿ ಬಸ್ ಚಾಲಕ ಚಿಂತಾಮಣಿ ತಾಲ್ಲೂಕಿನ ಕೈವಾರ (Kaiwara) ಗ್ರಾಮದ ಇಲಿಯಾಜ್ ಪಾಷಾ (34) ಸ್ಥಳದಲ್ಲೇ ಮೃತಪಟ್ಟು (Death), ಐವರು ಗಾಯಗೊಂಡಿದ್ದಾರೆ.
ಸರ್ಕಾರಿ ಬಸ್ ಚಿಂತಾಮಣಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಕೈವಾರದಿಂದ ಚಿಂತಾಮಣಿಗೆ ಬರುತ್ತಿದ್ದ ಮಿನಿ ಬಸ್ ಮತ್ತೊಂದು ವಾಹನ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದಿದೆ. ಕೈವಾರ ಪೃಥ್ವಿರಾಜ್, ಮಂಜುನಾಥರೆಡ್ಡಿ, ಸೈಫುಲ್ಲಾ ಹಾಗೂ ಸರ್ಕಾರಿ ಬಸ್ ಚಾಲಕ ಅಯೂಬ್ ಖಾನ್, ನಿರ್ವಾಹಕ ವಿಶ್ವನಾಥರೆಡ್ಡಿ ಗಾಯಗೊಂಡಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಡಿವೈಎಸ್‌ಪಿ ಮುರಳೀಧರ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.