ಕೆರೆ, ಸ್ಮಶಾನ ಒತ್ತುವರಿ ತಡೆಯಲು ಪ್ರತಿಭಟನೆ

- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನಲ್ಲಿ ಸ್ಮಶಾನಗಳು ಮತ್ತು ಕೆರೆ ಒತ್ತುವರಿಯನ್ನು (Lake Encroachment) ತೆರವುಗೊಳಿಸುವ ಬಗ್ಗೆ ಕ್ರಮಕೈಗೊಳ್ಳದ ಕಂದಾಯ ಅಧಿಕಾರಿಗಳು ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಕಾರ್ಯಕರ್ತರು ಬುಧವಾರ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಧರಣಿ (Protest) ಕುಳಿತರು.

ಕಂದಾಯ ಅಧಿಕಾರಿಗಳ ಭ್ರಷ್ಟಾಚಾರ, ನಿಷ್ಕ್ರಿಯತೆಯಿಂದ ತಾಲ್ಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಕೆರೆ, ಸ್ಮಶಾನ, ಗೋಮಾಳ ಒತ್ತುವರಿಯಾಗಿ ಸರ್ಕಾರಿ ಜಮೀನುಗಳು ಕಬಳಿಕೆಯಾಗುತ್ತಿವೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೆರೆ, ಸ್ಮಶಾನ, ಗೋಮಾಳಗಳ ಒತ್ತುವರಿ ತೆರವುಗೊಳಿಸಬೇಕು. ಭೂಗಳ್ಳರೊಂದಿಗೆ ಶಾಮೀಲಾಗಿರುವ ಭ್ರಷ್ಟ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾರಾರರು ತಿಳಿಸಿದರು.

ತಹಶೀಲ್ದಾರ್ ಸುದರ್ಶನ ಯಾದವ್ ಮನವಿ ಸ್ವೀಕರಿಸಿದರು. ಕೆಆರ್‌ಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಖಯ್ಯೂಮ್, ಪದಾಧಿಕಾರಿಗಳಾದ ಶಿವಾರೆಡ್ಡಿ, ಎಸ್.ಎ.ಶಬ್ಬೀರ್ ಪಾಷಾ, ವಿಶ್ವನಾಥ್, ಜೆ.ನಾಗರಾಜ್, ರಿಯಾಜ್ ಪಾಷಾ ಮತ್ತಿತರರು ಉಪಸ್ಥಿರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!