Chikkaballapur : ಚಿಂತಾಮಣಿ ತಾಲ್ಲೂಕಿನ ಪುಟ್ಟಗುಂಡ್ಲಹಳ್ಳಿಯಿಂದ ಬಿಲ್ಲಾಂಡ್ಲಹಳ್ಳಿಯವರೆಗಿನ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹2.15 ಕೋಟಿ ಕಾಮಗಾರಿ ಸೇರಿದಂತೆ ₹8 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ (development programs Bhoomi pooje) ಶನಿವಾರ ಚಾಲನೆ ಸಚಿವ ಡಾ.ಎಂ.ಸಿ. ಸುಧಾಕರ್ (MC Sudhakar) ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಎಂ.ಸಿ. ಸುಧಾಕರ್ “ಕುಶಾವತಿ ನದಿ ಮಿಂಡಿಗಲ್ ವಡ್ಡುಗೆ ಕಾಯಕಲ್ಪ ನೀಡಿ 17-18 ಕೆರೆ ತುಂಬಿಸುವುದು, ಕುಶಾವತಿಯ ಹೂಳು ತೆಗೆಯುವುದು, ಚೆಕ್ ಡ್ಯಾಂ ನಿರ್ಮಾಣಕ್ಕೆ ₹140 ಕೋಟಿ ಯೋಜನೆ ಪ್ರಸ್ತಾವನೆ ಸಲ್ಲಿಸಿ, ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿದೆ. ಯಸಗಲಹಳ್ಳಿಯ ಹತ್ತಿರ ದೊಡ್ಡ ಮಟ್ಟದಲ್ಲಿ ಹೂಳು ತೆಗೆದು ಹೆಚ್ಚು ನೀರು ಶೇಖರಣೆ ಮಾಡುವ ಅವಕಾಶವಿದೆ. ಫೆ.25 ರಂದು ಮಂಗಳವಾರ ಅಂಬಾಜಿದುರ್ಗ ಮಾರ್ಚ್ 1ರಂದು ಕೈವಾರ ಹೋಬಳಿಯಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಘುನಾಥರೆಡ್ಡಿ ಭಾಗವಹಿಸಿದ್ದರು.