ಬಾಲಕ ಕೊಲೆ: ಆರೋಪಿ ಬಂಧನ

- Advertisement -
- Advertisement -

Chintamani : ಸ್ವಂತ ಅಣ್ಣನ ಮಗನಾದ 3 ವರ್ಷದ ಗೌತಮ್ ಎಂಬ ಬಾಲಕನನ್ನು ಕತ್ತುಸೀಳಿ ಕೊಲೆ (Boy Murder) ಮಾಡಿ ಪಾಳು ಮನೆಯಲ್ಲಿ ಬಿಸಾಕಿ ಪರಾರಿಯಾಗಿದ್ದ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ (Murugamalla) ಹೋಬಳಿಯ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ (Nimmakayalahalli) ಆರೋಪಿ ರಂಜಿತ್‌ನನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಆರೋಪಿ ಕೊಲೆ ಮಾಡಿದ ಕೂಡಲೇ ಇದ್ದಕ್ಕಿಂದ್ದಂತೆ ಪರಾರಿಯಾಗಿರುವುದರಿಂದ ರಾತ್ರಿ ಗ್ರಾಮಕ್ಕೆ ಬರಬಹುದು ಎಂಬ ಅನುಮಾನದಿಂದ ಕಾದಿದ್ದ ಪೊಲೀಸರು ಆರೋಪಿ ಮಧ್ಯರಾತ್ರಿ ಒಂದು ಗಂಟೆಯ ಸಮಯದಲ್ಲಿ ಮನೆಯಿಂದ ಬಟ್ಟೆ ತೆಗೆದುಕೊಂಡು ಹೋಗಲು ಬಂದಾಗ ಬಂಧಿಸಿದ್ದರು.

ಕೊಲೆಗೆ ಕಾರಣ ಗೊತ್ತಾಗಿಲ್ಲ ಆರೋಪಿ ಬಾಯಿಬಿಡುತ್ತಿಲ್ಲ ಎನ್ನಲಾಗಿದ್ದು ಗುರುವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!