Chintamani : ಸೋಮವಾರ ನಡೆದ ಚಿಂತಾಮಣಿ ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿಯ (Peddur Grama Panchayat) ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣದ ಎಂ.ಶ್ವೇತಾ ಜನಾರ್ಧನರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. Election ಪ್ರಕ್ರಿಯೆ ಅವಧಿಯಲ್ಲಿ ಇತರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಸ್.ಶ್ರೀನಿವಾಸ್ ಎಂ.ಶ್ವೇತಾಜನಾರ್ಧನರೆಡ್ಡಿ ಅವರನ್ನು ಅವಿರೋಧ ಆಯ್ಕೆಯಾಗಿ ಘೋಷಸಿದರು.
ಮಾಜಿ ಅಧ್ಯಕ್ಷೆ ಗೋಪಮ್ಮ ಪಕ್ಷದ ಆಂತರಿಕ ಒಪ್ಪಂದಕ್ಕೆ ಅನುಗುಣವಾಗಿ ಈ ಮೊದಲು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ Election ನಡೆಯಿತು. ಗ್ರಾಮ ಪಂಚಾಯಿತಿಯಲ್ಲಿ Dr. M C Sudhakar ಬೆಂಬಲಿತ 11 ಸದಸ್ಯರು ಹಾಗೂ JDS ಪಕ್ಷದ ಬೆಂಬಲಿತ 4 ಸದಸ್ಯರು ಒಳಗೊಂಡ 15 ಸದಸ್ಯರಿದ್ದರು. M.C.S ಬಣದ ಒಬ್ಬ ಸದಸ್ಯ ಇತ್ತೀಚೆಗೆ ನಿಧನರಾಗಿದ್ದು, ಉಳಿದ 14 ಮಂದಿ ಸದಸ್ಯರಲ್ಲಿ 10 ಜನರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷೆಯಾದ ಬಳಿಕ ಪ್ರತಿಕ್ರಿಯಿಸಿದ ಎಂ.ಶ್ವೇತಾ ಜನಾರ್ಧನರೆಡ್ಡಿ “ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಪಕ್ಷಾತೀತವಾಗಿ ಸಮಾನ ಅವಕಾಶ, ಸೌಲಭ್ಯ ನೀಡಿ ಯಾವುದೇ ಅನುದಾನ ದುರುಪಯೋಗ ಆಗದಂತೆ ಸಮರ್ಪಕವಾದ ಪೂರ್ವ ಯೋಜನೆ ತಯಾರಿಸಿಕೊಂಡು ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಗುರಿ ನನ್ನದಾಗಿದೆ” ಎಂದು ಹೇಳಿದರು.
ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ನಂದಿಗಾನಹಳ್ಳಿ ಗ್ರಾ.ಪಂ ಸದಸ್ಯ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ಜಿ.ಪಂ ಮಾಜಿ ಸದಸ್ಯ ಶಿವಣ್ಣ, ವಿ. ಮಲ್ಲಿಕಾರ್ಜುನಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀರಾಮರೆಡ್ಡಿ, ಮುಖಂಡರಾದ ಎನ್.ಎಸ್.ರಮೇಶ್ ರೆಡ್ಡಿ, ಸೋಮಶೇಖರ್ ರೆಡ್ಡಿ, ನಾರಾಯಣಸ್ವಾಮಿ, ಮುರುಗಮಲ್ಲ ಗ್ರಾ.ಪಂ ಉಪಾಧ್ಯಕ್ಷ ಅನ್ಸರ್ಖಾನ್, ಎನ್.ಕೃಷ್ಣಾರೆಡ್ಡಿ, ಟಿ.ರಾಮಕೃಷ್ಣಾರೆಡ್ಡಿ,ಬಾಬುರೆಡ್ಡಿ, ಶಿವಾರೆಡ್ಡಿ, ಶಂಕರ್, ರಾಜಗೋಪಾಲ್, ಯಗವಕೋಟೆ ಶಿವಾ, ವೆಂಕಟರಾಮರೆಡ್ಡಿ, ವೈ ನರಸಿಂಹಮೂರ್ತಿ. ವೆಂಕಟರವಣಪ್ಪ, ತಿಮ್ಮಾರೆಡ್ಡಿ ಮತ್ತಿತರು ಉಪಸ್ಥಿತರಿದ್ದರು.