Chintamani : ಚಿಂತಾಮಣಿ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ (Government Polytechnic College) ₹15 ಕೋಟಿ ವೆಚ್ಚದ ನೂತನ ಕಟ್ಟಡದ ಕಾಮಗಾರಿಗೆ (New Building) ಶನಿವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (Dr M C Sudhakar) ಚಾಲನೆ (Construction) ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ “ರಾಜ್ಯದಲ್ಲೇ ನಾಲ್ಕನೆಯ ಸರ್ಕಾರಿ ಪಾಲಿಟೆಕ್ನಿಕ್ ಆಗಿರುವ ಸರ್ಕಾರಿ ಪಾಲಿಟೆಕ್ನಿಕ್‌ಗೆ 75 ವರ್ಷಗಳಾಗುತ್ತಿದ್ದು ಅಮೃತ ಮಹೋತ್ಸವ ಆಚರಣೆ ಸಮಯಕ್ಕೆ ಕಾಲೇಜಿನ ಕಟ್ಟಡಕ್ಕೆ ಆಧುನಿಕ ರೂಪ ನೀಡಲು ₹10 ಕೋಟಿ ಮಂಜೂರು ಮಾಡಲಾಗಿದೆ. ಪಾಲಿಟೆಕ್ನಿಕ್ ಆವರಣದಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಘಟಕ ಕಾಲೇಜನ್ನು ಆರಂಭಿಸಲಾಗಿದ್ದು ಆಯ್ದ ನಾಲ್ಕು ಕೋರ್ಸ್‌ಗಳಲ್ಲಿ ತಲಾ 60 ರಂತೆ 240 ಸೀಟುಗಳಿವೆ. 124 ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಉಳಿದಿರುವ ಸೀಟುಗಳ ಭರ್ತಿಗಾಗಿ ಕಾಲೇಜು ಹಂತದಲ್ಲೆ ದಾಖಲಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಮಾಡಿದೆ” ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷೆ ಕೆ.ರಾಣಿಯಮ್ಮ, ನಗರಸಭೆ ಸದಸ್ಯರು, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ ಬಾಬು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.