Chintamani : ವಯೋವೃದ್ಧರಿಗೆ ಬೆಡ್ ಶೀಟ್ ವಿತರಿಸಿ ಅನ್ನದಾನ ಮಾಡುವುದರ ಮೂಲಕ ಬಹುಜನ ನಾಯಕ ದಿವಂಗತ ಸಂಘಂ ಎನ್. ಶಿವಣ್ಣ (Sangham N Shivanna) ಅವರ 72ನೇ ಜನ್ಮದಿನವನ್ನು ಶಿವಣ್ಣ ಅವರ ಅಭಿಮಾನಿಗಳು ಭಾನುವಾರ ಆಚರಿಸಿದರು.
” ದಿವಂಗತ ಶಿವಣ್ಣ ರವರು ನಿರಂತರವಾಗಿ ಸಾಮಾಜಿಕವಾಗಿ ಶೋಷಣೆಗೊಳಗಾಗುತ್ತಿದ್ದ ದಲಿತ, ಹಿಂದುಳಿದ, ಅಲ್ಪಸಂಖ್ಯಾಂತರ ಪರ ಧ್ವನಿಯಾಗಿದ್ದರು. ಶಿವಣ್ಣ ಹೋರಾಟದ ಬದುಕನ್ನು ಇಂದಿನ ಯುವಜನತೆ ತಿಳಿದುಕೊಳ್ಳುವುದರ ಜೊತೆಗೆ ಅವರ ತತ್ವ ಸಿದ್ಧಾಂತ ಆದರ್ಶಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿರಬೇಕು” ಎಂದು ಸಮಾಜಸೇವಕ ಡಾ. ವಿ ಅಮರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಸ್.ಎಸ್ ನ ರಾಜ್ಯ ಸಂಚಾಲಕ ಹೂಡಿ ರಾಮಚಂದ್ರ, ನಾರಮಾಕಲಹಳ್ಳಿ ಕೃಷ್ಣ, ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ, ಪುರಸಭಾ ಸದಸ್ಯ ಮುನಿರಾಜ್, ಪಿಡಿಒ ಕಾಗತಿ ಚಲಪತಿ, ಹಿರಣ್ಯಪಲ್ಲಿ ಕೃಷ್ಣಪ್ಪ, ಚಿನ್ನಸಂದ್ರ ನಾರಾಯಣಸ್ವಾಮಿ, ಚಂದ್ರಣ್ಣ, ಜನಾರ್ದನಬಾಬು, ಗಂಗಾಧರ್, ವಿನೋಭಾ ಕಾಲೊನಿ ನರಸಿಂಹ, ಸೀತಮ್ಮ ವೆಂಕಟಸ್ವಾಮಿ, ಕೆ.ಎಸ್.ಆರ್.ಟಿ.ಸಿ. ಮಂಜುನಾಥ್, ಯೇಸು, ಕುರುಬೂರು ವೆಂಕಟೇಶ್ ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿದರು.