ಮೂವರು ಕಳ್ಳರ ಸೆರೆ: ₹47 ಲಕ್ಷದ ಆಭರಣ ವಶ

- Advertisement -
- Advertisement -

Chintamani : ಚಿಂತಾಮಣಿ ನಗರದ ಹೊರವಲಯದಲ್ಲಿ ನಡೆದಿದ್ದ ಕಳ್ಳತನದ ಪ್ರಕರಣಗಳನ್ನು ಭೇಧಿಸಿರುವ ಪೊಲೀಸರು ಮೂವರು ಕಳ್ಳರನ್ನು *(Thief Arrest) ಬಂಧಿಸಿ, ₹47.68 ಲಕ್ಷ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 16 ರಂದು ನಗರದ ಹೊರವಲಯದ ನಾಯನಹಳ್ಳಿ ಗ್ರಾಮದಲ್ಲಿ ವಿ.ಕೃಷ್ಣಾರೆಡ್ಡಿರವರ ನಿವಾಸದಲ್ಲಿ ಆದ ಕಳ್ಳತನ, ಸೆಪ್ಟೆಂಬರ್ 14 ರಂದು ತಾಲ್ಲೂಕಿನ ಕಾಗತಿ ಗ್ರಾಮದಲ್ಲಿ ರಾಜಪ್ಪ ಎಂಬುವವರ ಮನೆಯಲ್ಲಿ ಆದ ಕಳ್ಳತನವನ್ನು ಭೇದಿಸಲು ಎಸ್‌.ಪಿ ಕುಶಾಲ್ ಚೌಕ್ಸೆ ವಿಶೇಷ ತಂಡವನ್ನು ರಚಿಸಿದ್ದು ಈ ತಂಡ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದುಪುರದ ಮಹೇಶ್, ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದ ಮುದಾಸ್ಸಿರ್ ಪಾಷಾ, ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸಡುಲ್ತಾನ್ ಬಾಷಾ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಡಿವೈಎಸ್ಪಿ ಮುರಳೀಧರ್ ನೇತೃತ್ವದ ತಂಡದಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವರಾಜು, ಬಟ್ಲಹಳ್ಳಿ ಠಾಣೆಯ ಇನ್ಸ್ ಸ್ಪೆಕ್ಟರ್‌ ಪುನೀತ ನಂಜರಾಯ್, ಸಬ್ ಇನ್‌ಸ್ಪೆಕ್ಟರ್ ಮಮತ, ಇ.ನಾಗೇಂದ್ರಪ್ರಸಾದ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ದಿನೇಶ್, ವಿಶ್ವನಾಥ್, ಸಿದ್ದೇಶ್, ನರೇಶ್, ಕೃಷ್ಣಮೂರ್ತಿ, ಪ್ರವೀಣ್, ಶ್ರೀನಿವಾಸ್, ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!