Chintamani : ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಉಪ್ಪರಪೇಟೆ (Upparpet) ಗ್ರಾಮದಲ್ಲಿರುವ ಹಜರತ್ ಸೈಯದ್ ಜಿಂದೇ ಮದರ್ ಶಾ ವಲಿ, ಮತ್ತು ಹಜರತ್ ಸೈಯದ್ ಬಡತೇ ಪೀರ್ ಬಾಬಾ ದರ್ಗಾದ ಉರುಸ್ (ಗಂಧೋತ್ಸವ) (Urus) ಅದ್ದೂರಿಯಾಗಿ ನಡೆಯಿತು.
ಉರುಸ್ ಅಂಗವಾಗಿ ದರ್ಗಾವನ್ನು ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಸಾಥ್ ನೀಡಿದ್ದರು. ಸ್ಥಳೀಯ ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದರ್ಗಾಗೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು.
ಗ್ರಾಮದ ಸೈಯದ್ ಜಿಯಾವುಲ್ಲಾ, ಸೈಯದ್ ಚಾಂದ್ ಪಾಷಾ, ಸೈಯದ್ ಶಬ್ಬೀರ್, ಸೈಯದ್ ಅಫ್ಸರ್, ಅಫ್ರೋಜ್, ಶಕೀಲ್, ಶಫಿ, ಪ್ಯಾರೂ, ಅಮೀರ್, ನಜೀರ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.