Chintamani : ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಸಂಗಾತಿಯ ಮೇಲೆ ಹಲ್ಲೆ ಮಾಡಿ ಚಲಿಸುತ್ತಿದ್ದ ಲಾರಿಯ ಕೆಳಗೆ ತಳ್ಳಿದ್ದರಿಂದ ಆಕೆಯ ತಲೆ ಮೇಲೆ ಚಕ್ರಗಳು ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಂತಾಮಣಿ ನಗರದಳ್ಳಿ ನಡೆದಿದೆ.
ಆಂಧ್ರ ಪ್ರದೇಶದ ಪುಂಗನೂರು ಗ್ರಾಮದ ಸುಮೇರಾ ಖಾನಂ (42) ಮೃತಪಟ್ಟವರು. ಶಿಡ್ಲಘಟ್ಟದ ನಿವಾಸಿ, ಪತಿ ಮುನಿಕೃಷ್ಣಪ್ಪ (49) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಚಿಂತಾಮಣಿ ನಗರದ ಹಳೆಯ ಬಸ್‌ನಿಲ್ದಾಣ ಹತ್ತಿರದ ಸುಖ ಸಾಗರ್ ಹೋಟೆಲ್ ಮುಂದಿನ ರಸ್ತೆ ಸಮೀಪ ಇಬ್ಬರ ನಡುವೆ ಜಗಳ ಉಂಟಾಗಿ. ಕುಡಿದ ಮತ್ತಿನಲ್ಲಿದ್ದ ಆತ ಪತ್ನಿ ಮೇಲೆ ಹಲ್ಲೆ ನಡೆಸಿ ರಸ್ತೆಗೆ ತಳ್ಳಿದ್ದಾನೆ. ಅದೇ ಸಮಯಕ್ಕೆ ಬಂದ ಲಾರಿ ಕೆಳಗೆ ಸಿಲುಕಿ ಆಕೆಯ ತಲೆ ಮೇಲೆ ಚಕ್ರಗಳು ಹರಿದು ಪ್ರಾಣ ಕಳೆದುಕೊಂಡಿದ್ದಾರೆ.
ನಗರ ಠಾಣೆ ಇನ್‌ಸ್ಪೆಕ್ಟರ್ ರಂಗಶಾಮಿ ಹಾಗೂ ಸಿಬ್ಬಂದಿ ಸುದ್ದಿ ಆರೋಪಿಯನ್ನು ವಶಕ್ಕೆ ಪಡೆದಿದ್ದರೆ .