Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಹಸಿರು ಉಳಿಸಲು ತೀವ್ರ ಪ್ರಯತ್ನ ಮಾಡಬೇಕಾಗಿದೆ ಎಂದು ಕೆಲ ನಗರಸಭೆ ಸದಸ್ಯರು(CMC Memebers) ಗುರುವಾರ ಪ್ರತಿಭಟಿಸಿದರು (protest).
ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ನೇತೃತ್ವದಲ್ಲಿ, ಶನಿಮಹಾತ್ಮ ದೇವಾಲಯದ ಬಳಿ ಗಿಡಗಳಿಗೆ ನೀರು ಕೊಟ್ಟು ಪ್ರತಿಭಟಿಸಿದ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಗಿಡಗಳನ್ನು ನಾಶವಾಗದಂತೆ ಕಾಯುವ ಕೆಲಸಗಳನ್ನು ನಗರಸಭೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದರೆಡ್ಡಿ ಬಾಬು “ನಾನು ಅಧ್ಯಕ್ಷನಾಗಿದ್ದ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಸುಮಾರು1,200 ಗಿಡಗಳನ್ನು ನೆಟ್ಟಿದ್ದೇವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಗಿಡಗಳು ನಾಶವಾಗಿವೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ನಗರದ ಹಸಿರೀಕರಣ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಕನಿಷ್ಠ ಬೇಸಿಗೆಯ ನಾಲ್ಕು ತಿಂಗಳ ಕಾಲ ಗಿಡಗಳಿಗೆ ನೀರುಣಿಸಿದರೆ ಅನುಕೂಲ ಆಗುತ್ತದೆ” ಎಂದು ಹೇಳಿದರು.
ನಗರಸಭೆ ಸದಸ್ಯರಾದ ಯತೀಶ್, ಸತೀಶ್, ಸುಬ್ರಹ್ಮಣ್ಯಚಾರಿ, ಮುಖಂಡ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.