Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಬಿಎಲ್‌ಎ–2ಗಳಿಗೆ ಕಾರ್ಯಾಗಾರ (Congress Booth Level Workshop) ನಡೆಸಲಾಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಮುಂದಿನ ಲೋಕಸಭೆ ಚುನಾವಣೆಯು ಬಡವರು ಮತ್ತು ಶ್ರೀಮಂತರು, ರೈತರು ಮತ್ತು ಆರ್ಥಿಕ ಬಲಾಢ್ಯರ ನಡುವೆ ನಡೆಯುವ ಚುನಾವಣೆ. ಬಿಜೆಪಿ ಆಡಳಿತದಲ್ಲಿ ದೇಶವು ಬಡತನದತ್ತ ಸಾಗುತ್ತಿದ್ದು “2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ನನ್ನ ಕನಸಾದ ಎತ್ತಿನಹೊಳೆ ಯೋಜನೆ ನೀರು ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಮನೆ ಬಾಗಿಲಿಗೆ 2026ರ ವೇಳೆಗೆ ಬರಲಿದೆ. ಚಿಕ್ಕಬಳ್ಳಾಪುರದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಬೇಕು. ಆಂಧ್ರಪ್ರದೇಶದ ಗಡಿಯವರೆಗೆ ಬೃಹತ್ ಕೈಗಾರಿಕೆಗಳು ನಿರ್ಮಾಣವಾಗಬೇಕು. ಲೋಕಸಭೆಯಲ್ಲಿ ಕಾಂಗ್ರೆಸ್ ಬಂದರೆ ಮಾತ್ರ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್, ಮುಖಂಡ ನಿಕೇತ್ ಮೌರ್ಯ, ನಂದಿ ಆಂಜನಪ್ಪ, ಯಲುವಳ್ಳಿ ರಮೇಶ್, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಶಿವಾನಂದ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಂ, ಮಮತಾ ಮೂರ್ತಿ, ರಫೀಕ್ ಅಹಮ್ಮದ್, ಕೃಷ್ಣಪ್ಪ ಮತ್ತಿತರರು ಉಪಸ್ತುತರಿದ್ದರು.