2 ಕೋಟಿ ರೂ. ಬಡ್ಡಿರಹಿತ ಸಾಲ ವಿತರಣೆ

- Advertisement -
- Advertisement -

Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಶ್ರೀಸಾಯಿಬಾಬಾ ಮಂದಿರದ ಸಮುದಾಯ ಭವನದಲ್ಲಿ ಭಾನುವಾರ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ವ್ಯಾಪ್ತಿಯ ಮಹಿಳಾ ಸ್ವ ಸಹಾಯ ಸಂಘಗಳಿಗೆ DCC Bank ನಿಂದ ಬಡ್ಡಿರಹಿತವಾಗಿ 2 ಕೋಟಿ ರೂಗಳ ಸಾಲವನ್ನು (Interest Free Loan) ವಿತರಣೆ ಮಾಡಿ ಶಾಸಕ ವಿ.ಮುನಿಯಪ್ಪ (V Muniyappa) ಅವರು ಮಾತನಾಡಿದರು.

ಯಾವುದೆ ವಾಣಿಜ್ಯ ಬ್ಯಾಂಕುಗಳು ಸಹ ನೀಡದಷ್ಟು ಆಧ್ಯತೆಯನ್ನು ಡಿಸಿಸಿ ಬ್ಯಾಂಕ್‌ನಿಂದ ಮಹಿಳೆಯರು ಹಾಗೂ ರೈತರಿಗೆ ನೀಡಲಾಗುತ್ತಿದೆ. ರೈತರು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಡ್ಡಿ ಇಲ್ಲದೆ ಸಾಲ ವಿತರಿಸುವ ಬ್ಯಾಂಕ್ ಡಿಸಿಸಿ ಬ್ಯಾಂಕ್ ಮಾತ್ರ ಆಗಿದೆ. ತಾವು ಹಣಕಾಸಿನ ವ್ಯವಹಾರವನ್ನು ಬ್ಯಾಂಕ್ ಮೂಲಕ ಮಾತ್ರ ಮಾಡುವುದು ಸೂಕ್ತವಾಗಿದ್ದು, ಡಿಸಿಸಿ ಬ್ಯಾಂಕ್‌ನ ಶಾಖೆಗಳಲ್ಲಿ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡುವ ಮೂಲಕ ಬ್ಯಾಂಕ್‌ನ್ನು ಇನ್ನಷ್ಟು ಸದೃಢವಾಗಿಸುವ ಕೆಲಸ ನಿಮ್ಮಿಂದಲೆ ಆಗಬೇಕಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್ ವ್ಯಾಪ್ತಿಯ 41 ಸಂಘಗಳಿಗೆ 2 ಕೋಟಿ ರೂಗಳ ಸಾಲವನ್ನು ಬಿಡ್ಡಿ ಇಲ್ಲದೆ ನೀಡುತ್ತಿದ್ದೇವೆ. ಮಹಿಳೆಯರು ಸಕಾಲಕ್ಕೆ ಸಾಲವನ್ನು ಮರುಪಾವತಿಸುತ್ತಿರುವುದು ಸಂತಸದ ವಿಷಯ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್, ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಭಕ್ತರಹಳ್ಳಿ ಮುನಿರಾಜು, ಉಪಾಧ್ಯಕ್ಷ ನಿಶಾಂತ್, ಗುಡಿಯಪ್ಪ, ಮುತ್ತೂರು ಚಂದ್ರೇಗೌಡ, ವಿ.ಸುಬ್ರಮಣಿ, ಬ್ಯಾಂಕ್‌ನ ಸಿಇಒ ಮಂಜುನಾಥ್, ರಾಮರೆಡ್ಡಿ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -