17.5 C
Bengaluru
Friday, November 22, 2024

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದ ಅಣಕನೂರು ಬಳಿಯ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಮಂಗಳವಾರ ಪ್ರಾರಂಭವಾದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಜಿಲ್ಲಾಧಿಕಾರಿ ಆರ್. ಲತಾ (Deputy Commissioner R Latha) ಚಾಲನೆ ನೀಡಿದರು.

ಎಲ್ಲ ಇಲಾಖೆ ರಕ್ಷಣಾತ್ಮಕವಾಗಿ ರಕ್ಷಣೆ ಮಾಡಬಲ್ಲ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆ ಕಾರ್ಯ ಅತ್ಯಂತ ಗೌರವಯುತವಾದುದು. ಪೊಲೀಸರು ನಿತ್ಯ ಸಮಾಜದಲ್ಲಿ ಸಾರ್ವಜನಿಕರ ಜತೆಗೆ ಬೆರೆತು ಕೆಲಸ ಮಾಡಿ ವೃತ್ತಿ ಪಾವಿತ್ರ್ಯತೆ ಜತೆಗೆ ಗೌರವ ಮನ್ನಣೆ ಪಡೆಯಬೇಕಾಗಿದೆ.

ಶತ್ರುಗಳಿಂದ ಸೈನಿಕರು ದೇಶದ ಗಡಿ ರಕ್ಷಣೆ ಮಾಡಿದರೆ ದೇಶದೊಳಗಿನ ಸಮಾಜ ಘಾತುಕಶಕ್ತಿಗಳಿಂದ ಸಾರ್ವಜನಿಕರ ರಕ್ಷಣೆ ಸದಾ ಕಾಲ ಪೊಲೀಸರು ಮಾಡುತ್ತಿದ್ದಾರೆ ಇವರಿಬ್ಬರ ಸೇವೆ ಅನನ್ಯವಾದದ್ದು. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ಪೊಲೀಸರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಪೊಲೀಸ್ ಇಲಾಖೆಯವರನ್ನ ಜಿಲ್ಲಾಧಿಕಾರಿ ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ‌.ಮಿಥುನ್ ಕುಮಾರ್ ಮಾತ ನಾಡಿ, ಕೋವಿಡ್–19 ನಿಯಂತ್ರಣದಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ಇಲಾಖೆಗಷ್ಟೇ ಪರಿಶ್ರಮಮತ್ತು ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದೆ. ಕೋವಿಡ್ ಆರೈಕೆ ಕೇಂದ್ರಗಳ ಬಳಿ ಹಗಲಿರುಳು ಕರ್ತವ್ಯ ನಿರ್ವಹಿಸಿ ಸೋಂಕು ಹರಡದಂತೆ ಸರ್ಕಾರ ಕೈಗೊಂಡ ನಿಯಮಾವಳಿ ಯಶಸ್ವಿಗೆ ಪೊಲೀಸರ ಕೊಡುಗೆ ಅಪಾರವಾಗಿದೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡಬೇಕಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜತೆಗೆ ವ್ಯಾಯಾಮ, ಯೋಗ ಅಭ್ಯಾಸ ಮೈಗೂಡಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ತಂಡಗಳ ಪಥಸಂಚಲನ ಗಮನ ಸೆಳೆಯಿತು. ಇದೇ ವೇಳೆ ಪೊಲೀಸ್ ಪ್ರತಿಜ್ಞಾ ವಿಧಿ ಬೋಸಲಾಯಿತು. ಒಟ್ಟು 7 ತಂಡ ಪಾಲ್ಗೊಂಡಿರುವ ಕ್ರೀಡಾಕೂಟ ಡಿ.23ರವರೆಗೆ ನಡೆಯಲಿದೆ.

ಜಿಲ್ಲಾ ಪಂಚಾಯಿತಿ ಸಿಇಒ (Zilla Panchayat CEO) ಪಿ.ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಕಾರಿ ಅರಸಲನ್, ಅಂತರ ರಾಷ್ಟ್ರೀಯ ಕ್ರೀಡಾಪಟು ಜಿ.ಆರ್.ವಿಜಯ ಶಾಂತಕುಮಾರ್, DYSP ವಾಸುದೇವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!