Home News Chikkaballapur ದಲಿತ ಸಂಘರ್ಷ ಸಮಿತಿ ಸದಸ್ಯರಿಂದ ಸರ್ಕಾರಕ್ಕೆ ಮನವಿ

ದಲಿತ ಸಂಘರ್ಷ ಸಮಿತಿ ಸದಸ್ಯರಿಂದ ಸರ್ಕಾರಕ್ಕೆ ಮನವಿ

0
546
Chickaballapur DSS Request Letter

Chikkaballapur : ಜಿಲ್ಲಾ ದಲಿತ ಸಂಘರ್ಷ ಸಮಿತಿ (Ambedkar ವಾದ) (DSS) ಸದಸ್ಯರು ಶುಕ್ರವಾರ ನ್ಯಾ.ನಾಗಮೋಹನದಾಸ್ (Justice Nagmohandas) ಅವರ ವರದಿಯ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಅನುಸಾರ ಮೀಸಲಾತಿ ಹೆಚ್ಚಿಸುವುದು, ದಲಿತರ ಮೇಲೆ ದೌರ್ಜನ್ಯ ತಡೆಯುವಲ್ಲಿ ವಿಫಲರಾದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಖಜಾಂಚಿ ಮಂಜುನಾಥ್ ಸಾದಲಿ “ಕಾಯ್ದೆಯಲ್ಲಿರುವ ದಲಿತ ವಿರೋಧಿ ಅಂಶಗಳನ್ನು ರದ್ದುಗೊಳಿಸಿ SCSP, TSP ಹಣದ ದುರುಪಯೋಗ ತಡೆಯಬೇಕು. PTCL ಕಾಯ್ದೆ ತಿದ್ದುಪಡಿ ಪಡಿಸಿ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ವಸತಿಹೀನ ಬಡವರಿಗೆ ಮತ್ತು ದಲಿತರಿಗೆ ಉಚಿತವಾಗಿ ವಸತಿ ಸೌಕರ್ಯ ಕಲ್ಪಿಸಬೇಕು” ಎಂದು ಮನವಿ ಮಾಡಿದರು.

ಜಿಲ್ಲಾ ಸಂಘಟನಾ ಸಂಚಾಲಕ ಅಂಗಟ್ಟ ನಾಗರಾಜ್, ಗೋವಿಂದಪ್ಪ, ನಾರಾಯಣಸ್ವಾಮಿ, ಆದಿನಾರಾಯಣಪ್ಪ, ನಾಲಪ್ಪ, ನರಸಿಂಹಪ್ಪ ಮತಿತ್ತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!