27.9 C
Bengaluru
Wednesday, February 25, 2026

ED, IT ದಾಳಿಗಳಿಂದ ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಪ್ರದೀಪ್ ಈಶ್ವರ್

- Advertisement -
- Advertisement -

Chikkaballapur : ED ಮತ್ತು IT ದಾಳಿಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಹೇಳಿದ್ದಾರೆ. “ಅವರು ಸಾವಿರ ನೋಟಿಸ್‌ ಕಳುಹಿಸಲಿ, ಡೋಂಟ್ ಕೇರ್‌. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM D K Shivakumar) ಅವರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಭಾನುವಾರ ನಗರದಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಡಿ, ಐಟಿಯವರು ಏನು ಮಾಡಬೇಕೋ ಮಾಡಲಿ. ನಾವು ಕಾನೂನಿನ ಪ್ರಕಾರ ಹೋರಾಡಲು ಸಿದ್ಧ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಗುಂಡಿಗೆಯಂತೆ ಇದ್ದಾರೆ. ನೇರವಾಗಿ ಎದುರಿಸಲು ಅಸಮರ್ಥವಾದ ಬಿಜೆಪಿ ಇಡಿ ಮತ್ತು ಐಟಿ ದಾಳಿಗಳ ಮೂಲಕ ನಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ” ಎಂದರು.

“ಇದು ರಾಜಕೀಯ ಪ್ರೇರಿತ ದಾಳಿ. ಆದರೆ ಇಂತಹ ಬೆದರಿಕೆಗಳಿಂದ ನಾವು ಹಿಂದಕ್ಕೆ ಹೋಗೋಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಯಾಗಿದ್ದು, ಈ ರೀತಿಯ ದಾಳಿಗಳಿಗೆ ನಾವು ಕೀಳಾಗುವುದಿಲ್ಲ. ಇಡಿ ಮತ್ತು ಐಟಿಯ ನೋಟಿಸುಗಳಿಗೂ ಪ್ರತಿಯಾಗಿ ಕಾನೂನಿನ ಪ್ರಕ್ರಿಯೆ ಮೂಲಕ ಎದುರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ

ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಕ್ರಷರ್‌ಗಳ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು. “ನಂದಿಬೆಟ್ಟ ಸೇರಿದಂತೆ ಅನೇಕ ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದೇನೆ. ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!