25 C
Bengaluru
Wednesday, December 4, 2024

ಜಿಲ್ಲೆಯಲ್ಲಿ ಸಂಭ್ರಮದ ಈದ್ ಮಿಲಾದ್

- Advertisement -
- Advertisement -

Chikkaballapur : ಮಹಮ್ಮದ್ ಪೈಗಂಬರ್ (Muhammad ibn Abdullah) ಜನ್ಮದಿನವಾದ ಈದ್‌ ಮಿಲಾದ್ (Eid Milad) ಹಬ್ಬವನ್ನು ಭಾನುವಾರ ಮುಸ್ಲಿಮರು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು. Covid-19 ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಮೆರವಣಿಗೆ ಮತ್ತು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿಷೇಧಿಸಲಾಗಿದ್ದು ಈ ವರ್ಷ ವಿಜೃಂಭಣೆಯ ಮೆರವಣಿಗೆ ಮತ್ತು ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು.

ಚಿಂತಾಮಣಿ

Eid Milad Murugamalla

ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ತಾಣ ಮುರುಗಮಲ್ಲ (Murugamalla) ಗ್ರಾಮದಲ್ಲಿ ಶನಿವಾರ ರಾತ್ರಿ ಹಜರತ್ ಅಮ್ಮಾಜಾನ್, ಬಾವಾಜಾನ್ ದರ್ಗಾದ ‘ಗೌಸೇಪಾಕ್ ನಶಾನ್‌’ ನ ಗಂಧೋತ್ಸವ ಆಚರಣೆಗೆ ಚಾಲನೆ ನೀಡಲಾಯಿತು.

ಚಿಂತಾಮಣಿ ನಗರದಲ್ಲಿ ವಿವಿಧ ಸ್ಥಬ್ದಚಿತ್ರಗಳು, ವೇಷಭೂಷಣ ಮೆರವಣಿಗೆ ಮಾಡಲಾಯಿತು.

ಶಿಡ್ಲಘಟ್ಟ

Eid Milad Chintamani

ಶಿಡ್ಲಘಟ್ಟ (Sidlaghatta) ನಗರದಲ್ಲಿ ಮುಸ್ಲಿಂ ಸಮುದಾಯವರು ಮುಹಮ್ಮದ್ ಫೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ಥಬ್ದ ಚಿತ್ರದ ಮೆರವಣಿಗೆ ನಡೆಸಿ ಮುಹಮ್ಮದ ಅವರ ಕುರಿತ ನಾತೆ ಮತ್ತು ಕವ್ವಾಲಿಗಳು ಹಾಡಲಾಯಿತು.

ಬಾಗೇಪಲ್ಲಿ

Eid Milad Bagepalli

ಬಾಗೇಪಲ್ಲಿ (Bagepalli) ಪಟ್ಟಣದ ಗೂಳೂರು ರಸ್ತೆಯಲ್ಲಿನ ಇಸ್ಮಾಯಿಲ್ ಖಾದ್ರಿ ಕುಟುಂಬದವರು, ನೆರೆಹೊರೆಯವರು ಸೇರಿದಂತೆ ಮುಸ್ಲಿಂ ಸಮುದಾಯವರು ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನದ ಮೇಲೆ ಮೆಕ್ಕಾ, ಮದೀನಾದ ಭಾವಚಿತ್ರಗಳನ್ನು ಮೆರವಣಿಗೆ ಮಾಡಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!