Sidlaghatta : ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ “ಕಡಿಶೀಗೇನಹಳ್ಳಿ ಗಡಿಯಿಂದ ಕಂಬದಹಳ್ಳಿ ಗ್ರಾಮದ ಗಡಿಯವರೆಗೆ ಇರುವ ರಾಜಕಾಲುವೆಯನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಇದರಿಂದಾಗಿ ಹರಿದು ಬಂದ ನೀರು ಮುಂದಕ್ಕೆ ಹೋಗಲಾಗದೆ ತೋಟ, ಹೊಲಗಳಿಗೆ ನೀರು ನುಗ್ಗಿ, ಸುಮಾರು ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ರಾಗಿ, ಹಿಪ್ಪುನೇರಳೆ, ಹೂವು, ದ್ರಾಕ್ಷಿ ತರಕಾರಿ ಬೆಳೆಗಳು ಮಾವು, ಗೋಡಂಬಿ ಮುಂತಾದ ಬೆಳೆಗಳು ಹಾಳಾಗಿವೆ. ಆದ್ದರಿಂದ ಅಧಿಕಾರಿಗಳು ದಯಮಾಡಿ ಈ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಆಗಿರುವ ರಾಜಕಾಲುವೆಯನ್ನು ತೆರವುಗೊಳಿಸಬೇಕು” ಎಂದು ವಿನಂತಿಸಿಕೊಂಡರು.
ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಸದಸ್ಯ ದ್ಯಾವಪ್ಪ, ಮುನೀಂದ್ರ, ಆಂಜಿ, ನಾರಾಯಣಸ್ವಾಮಿ, ಪ್ರತೀಪ್, ಸಂಪತ್ ಕುಮಾರ್, ಮುನಿವೆಂಕಟಸ್ವಾಮಿ, ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.