Chikkaballapur : ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ‘ಫ.ಗು ಹಳಕಟ್ಟಿ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ (Fa.Gu. Halakatti – Vachana Sahitya) ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “12ನೇ ಶತಮಾನದ ವಚನ ಸಾಹಿತ್ಯದ ವ್ಯಾಪಕ ಪ್ರಸರಣಕ್ಕೆ ಹಾಗೂ ವಚನ ಸಾಹಿತ್ಯ ಜನಮಾನಸದಲ್ಲಿ ನೆಲೆ ನಿಲ್ಲಲು ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರವಾದುದು. ಕನ್ನಡ ಸಾಹಿತ್ಯವು ವಿಶ್ವದಲ್ಲೇ ಶ್ರೀಮಂತ ಸಾಹಿತ್ಯವಾಗಿದೆ. ಯಾವುದೇ ವ್ಯಕ್ತಿ ಜೀವನದುದ್ದಕ್ಕೂ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದಿದರೂ ಮತ್ತಷ್ಟು ಪುಸ್ತಕಗಳು ಬಾಕಿ ಉಳಿದಿರುತ್ತವೆ. ಅಷ್ಟು ಸಮೃದ್ಧವಾಗಿ ಸಾಹಿತ್ಯ ರಚನೆ ಆಗಿದೆ. ರನ್ನ, ಪಂಪ, ಪೊನ್ನ, ಜನ್ನ, ನಾಗಚಂದ್ರ, ಕುವೆಂಪು ಇವರೆಲ್ಲರ ಪರಿಶ್ರಮದಿಂದ ಸಮೃದ್ಧವಾಗಿ ಬೆಳೆದಿದೆ. ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಕನ್ನಡ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಶರಣ ಚಟ್ನಹಳ್ಳಿ ಮಹೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ರಾಜೇಂದ್ರ ಪ್ರಸಾದ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮೋಹನ್ ಕುಮಾರ್, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಅಮೃತ್ ಕುಮಾರ್, ಸಮಾಜ ಸೇವಕ ವೆಂಕಟೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ಮನೀಷ್ ಮತ್ತಿತರರು ಉಪಸ್ಥಿತರಿದ್ದರು.