Chelur : ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾ, ಅಕ್ಷಯ ಫೌಂಡೇಶನ್ ಟ್ರಸ್ಟ್ ಹಾಗೂ ತಾಲ್ಲೂಕು ಬ್ರಾಹ್ಮಣ ಸಭಾ, ವಿವಿಧ ಸಂಘ ಸಂಸ್ಥೆ ಹಾಗೂ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ಭಾನುವಾರ ಚೇಳೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾಮಾನ್ಯ ರೋಗ ವಿಭಾಗ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ನರರೋಗ, ಸುಟ್ಟ ಗಾಯ, ಮಕ್ಕಳ ಶಸ್ತ್ರ ಚಿಕಿತ್ಸೆ, ಮೂಳೆ ವಿಭಾಗ, ಕ್ಯಾನ್ಸರ್, ಹೃದಯ, ಸ್ತ್ರೀ ರೋಗ ಸೇರಿದಂತೆ 18 ಕ್ಕೂ ಹೆಚ್ಚು ಕಾಯಿಲೆಗಳ ಚಿಕಿತ್ಸಾ ವಿಭಾಗಗಳ ಸೇವಾ ಸೌಲಭ್ಯವನ್ನು 800ಕ್ಕೂ ಹೆಚ್ಚು ಜನರು ಪಡೆದರು.
ಶಿಬಿರದಲ್ಲಿ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಲಕ್ಷ್ಮಿನಾರಾಯಣ, ನಾಗಭೂಷಣ್, ಪಿ.ಪ್ರಕಾಶ್, ಮುನಿರಾಮಯ್ಯ, ವೇಣುಗೋಪಾಲ, ರಘುವೀರ ಶರ್ಮ, ಕೃಷ್ಣಾ ಭಾಗವಹಿಸಿದ್ದರು.