Gauribidanur : ಗಂಗಾಕಲ್ಯಾಣ ಯೋಜನೆಯಡಿಯಲ್ಲಿ (Karnataka Ganga Kalyana Scheme) 2018-19ನೇ ಸಾಲಿನಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದಿಂದ ಮಂಜೂರಾಗಿ ಕೊರೆದಿದ್ದ ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಪರಿಕರಗಳನ್ನು ಗೌರಿಬಿದನೂರು ನಗರ ಹೊರವಲಯದ ಮಿನಿ ವಿಧಾನಸೌಧದ ಬಳಿ ಶುಕ್ರವಾರ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N. H. Shivashankara Reddy) ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕರು “ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಪರಿಶಿಷ್ಟ ಪಂಗಡದ ಸುಮಾರು 34 ಫಲಾನುಭವಿಗಳಿಗೆ ಪಂಪ್‌ಸೆಟ್ ಪರಿಕರಗಳನ್ನು ನೀಡಲಾಗುತ್ತಿದ್ದು ರೈತರು ಇದರಿಂದಾಗಿ ಕೃಷಿ ಚಟುವಟಿಕೆಗಳ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಲು ಸಾಧ್ಯವಾಗಿದೆ. ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೆ ಹಂತ ಹಂತವಾಗಿ ಪರಿಕರಗಳನ್ನು ಹಾಗೂ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು” ಎಂದು ಹೇಳಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಸಿ.ಜಯರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು, ನಿಗಮ ಅಧಿಕಾರಿ ಕುಮಾರ್, ಮುಖಂಡ ಎಚ್.ಎನ್.ಪ್ರಕಾಶರೆಡ್ಡಿ, ಮುದುಗೆರೆ ತಿಮ್ಮಯ್ಯ, ಇ.ಮಂಜುನಾಥ್, ಶ್ರೀರಾಮಯ್ಯ, ಮಿಲ್ ಬಾಬು, ರಾಜಗೋಪಾಲ್, ನಾರಾಯಣಸ್ವಾಮಿ, ವೆಂಕಟರಮಣ, ವಿಜಯ್ ಕುಮಾರ್, ಅಸ್ಲಾಂ ಉಪಸ್ಥಿತರಿದ್ದರು.