Gauribidanur : ಗೌರಿಬಿದನೂರು ಇಡಗೂರು ರಸ್ತೆಯಲ್ಲಿ ಶನಿವಾರ ಸಂಜೆ ವ್ಹೀಲಿ (bike wheeling) ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಒಬ್ಬ ಅಪ್ರಾಪ್ತ ಸೇರಿದಂತೆ ಮೂವರನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ (Arrest).
ಪೊಲೀಸರು ಆರೋಪಿಗಳನ್ನು ಅಬ್ದುಲ್ ರೆಹಮಾನ್, ಮುಬಾರಕ್, ಕಾರ್ತಿಕ್ ಎಂದು ಗುರುತಿಸಲಾಗಿದ್ದು ಆರೋಪಿಗಳ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.