Gauribidanur : ಗೌರಿಬಿದನೂರು ನಗರಸಭೆ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರವೀಂದ್ರ ನಗರಸಭೆ ಆಯ-ವ್ಯಯ ಮಂಡನೆಯ ಸಭೆಯ ಅಧ್ಯಕ್ಷತೆ ವಹಿಸಿ ನಗರಸಭೆಯ 31 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ 2024-25ನೇ ಸಾಲಿನ ₹ 48.45 ಕೋಟಿ ಮೊತ್ತದ ವೆಚ್ಚವನ್ನು ಭರಿಸಿ ₹ 21.82 ಲಕ್ಷಗಳ ಉಳಿತಾಯ ಬಜೆಟ್ (CMC Budget) ಅನ್ನು ಮಂಡಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.ಸಾರ್ವಜನಿಕರಿಗೆ ಗೃಹ ಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿ ಗಾಗಿ ನೀರನ್ನು ಒದಗಿಸಲು ಕೊಳವೆ ಬಾವಿಗಳ ನಿರ್ವಹಣೆ ಮಾಡುವುದು, ಬೀದಿ ದೀಪಗಳನ್ನು ಅಳವಡಿಸಿ ನಿರ್ವಹಣೆ,ಸಾರ್ವಜನಿಕರ ಶೌಚಾಲಯಗಳ ದುರಸ್ತಿ,ಉದ್ಯಾನವನಗಳು ಮತ್ತು ಆಟದ ಮೈದಾನಗಳ ಅಭಿವೃದ್ಧಿ, ಕಸ ವಿಲೇವಾರಿ ಮತ್ತು ನಿರ್ವಹಣೆ, ಎಸ್. ಸಿ /ಎಸ್. ಟಿ ಹಾಗೂ ಹಿಂದುಳಿದ ವರ್ಗದ ಬಡವರಿಗಾಗಿ ಮತ್ತು ವಿಶೇಷ ಚೇತನರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿ ಆರ್ಥಿಕ ಸೌಲಭ್ಯ ಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ನಗರಸಭೆ ಆಯುಕ್ತೆ ಗೀತಾ, ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ನಗರಸಭೆ ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.