Gauribidanur : ಗೌರಿಬಿದನೂರು ನಗರಸಭೆ ಸಭಾಂಗಣದಲ್ಲಿ 2024–25ನೇ ಸಾಲಿನ ನಗರಸಭೆಯ ಬಜೆಟ್ (CMC Budget) ಸಿದ್ಧತೆಗಳ ಕುರಿತ ಪೂರ್ವಭಾವಿ ಸಭೆ (Preliminary meeting) ಯನ್ನು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಬುಧವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರವರಿಗೆ ನಗರಸಭೆ ಸದ್ಯಸರು ಸಾಮಾನ್ಯ ಸಭೆಯನ್ನು ಒಂದು ವರ್ಷದಿಂದ ಕರೆದಿಲ್ಲ. ಇದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ನಗರದಲ್ಲಿ ನೈರ್ಮಲ್ಯ,ನೀರಿನ ಸರಬರಾಜು, ಬೀದಿ ದೀಪಗಳ ನಿರ್ವಹಣೆ ತುಂಬಾ ಕೆಟ್ಟದಾಗಿದ್ದು ಖಾತೆಗಳ ಬದಲಾವಣೆಯ ಸಮಸ್ಯೆಯಾಗಿದೆ ಎಂದು ದೂರಿದರು.
ಸಭೆಯಲ್ಲಿ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ಪೌರಾಯುಕ್ತೆ ಡಿ.ಎಂ.ಗೀತಾ, ಸದ್ಯಸರಾದ ಪರೀದ್, ಮಂಜುಳಾ, ಖಲೀಮುಲ್ಲಾ, ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.