Gauribidanur : ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಮೇಶ್ ಗುಗ್ಗುರಿ ನೇತೃತ್ವದಲ್ಲಿ ದಲಿತರ ಕುಂದು ಕೊರತೆ ಸಭೆ (Dalits’ grievance meeting) ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೆ. ನಂಜುಂಡಪ್ಪ, ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ದಲಿತ ಮುಖಂಡರನ್ನು ಆಹ್ವಾನಿಸದೆ ತಹಶೀಲ್ದಾರರು ಕಡೆಗಣಿಸಿದ್ದಾರೆ. ವಾಟದಹೊಸಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಕಲ್ಯಾಣ ಮಂಟಪಗಳಿದ್ದು ಅವುಗಳನ್ನು ದಲಿತರಿಗೆ ನೀಡಲು ಹಿಂದೇಟು ಹಾಕುತ್ತಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮುಖಂಡರಾದ ಬಾಲಯ್ಯ, ಮಂಜುನಾಥ್, ಅಂಜಿನಮೂರ್ತಿ, ಸಿ.ಚನ್ನಪ್ಪ, ಸಿ. ಜಿ. ಗಂಗಪ್ಪ, ಗಂಗಾಧರಯ್ಯ, ಬಾಲಕೃಷ್ಣ, ಅಂಜಿ, ಅನಿತಮ್ಮ, ಕಲ್ಪನಾ, ರಾಜು, ಗಂಗಾಧರಯ್ಯ, ಶ್ರೀನಿವಾಸ್, ಅಶ್ವತ್ಥಪ್ಪ, ವೆಂಕಟೇಶ್, ನಾರಾಯಣಪ್ಪ ಇತರರು ಪಾಲ್ಗೊಂಡಿದ್ದರು.