Gauribidanur : ಗಣೇಶೋತ್ಸವ ಸಮಿತಿ ವತಿಯಿಂದ ಗೌರಿಬಿದನೂರು ನಗರದ ಹೊರವಲಯದ ಬೈಪಾಸ್‌ನಲ್ಲಿ 19ನೇ ಗಣೇಶನ ವಾರ್ಷಿಕೋತ್ಸವ ಅಂಗವಾಗಿ ಹಿಂದು ಜಾಗರಣ ವೇದಿಕೆ (Hindu Jagran Forum) ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ‘ಹಿಂದೂ ಸಿಂಹ ಶರಬ ಗಣೇಶ’ ಮೂರ್ತಿಯನ್ನು ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ (Procession) ನಡೆಸಿ ವಿಸರ್ಜಿಸಲಾಯಿತು.
ಕೊಂಬು, ಕಹಳೆ, ಬೊಂಬೆ, ತಮಟೆ, ವಾದ್ಯ ಹಾಗೂ DJ ಸೌಂಡ್ ಸಿಸ್ಟಮ್ ಮತ್ತು ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ವಾಹನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾವಿರಾರು ಸಂಖ್ಯೆ ಭಕ್ತಾಧಿಗಳ ಮದ್ಯೆ ಮೆರವಣಿಗೆ ಮಾಡಲಾಯಿತು.
ಕೋಲಾರ ಸಂಸದ ಮುನಿಸ್ವಾಮಿ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾದ ರವಿ ಕುಮಾರ್, ಮುಖಂಡರಾದ ಸಿ.ಮಂಜುನಾಥರೆಡ್ಡಿ, ಸಿ.ಆರ್.ನರಸಿಂಹಮೂರ್ತಿ, ಕೆ.ಎಚ್.ಪುಟ್ಟಸ್ವಾಮಿಗೌಡ, ದೀರಜ್, ಬಿ.ಜಿ.ವೇಣುಗೋಪಾಲರೆಡ್ಡಿ, ಡಾ.ಎಚ್.ಎಸ್.ಶಶಿಧರ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.