Gauribidanur : ಜಲ ಜೀವನ ಮಿಷನ್ (Jal Jeevan Mission) ಯೋಜನೆಯಡಿ ಗೌರಿಬಿದನೂರು ತಾಲ್ಲೂಕಿನ ನಗರಗೆರೆ, ಡಿ.ಪಾಳ್ಯ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ಸುಮಾರು 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳಿಗೆ ಮನೆ ಮನೆಗೆ ನೀರು ಒದಗಿಸುವ ಯೋಜನೆ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ (Guddali Puja) ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ” ಜಲ ಜೀವನ್ ಮಿಷನ್ ಯೋಜನೆಯು ಉತ್ತಮವಾಗಿದ್ದು ಇದರ ಮೂಲಕ ನೀರಿಗೆ ಪರದಾಡುವುದನ್ನು ತಪ್ಪಿಸಿ, ಮುಂದಿನ ಎರಡು ತಿಂಗಳ ಒಳಗಾಗಿ ಕ್ಷೇತ್ರದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸದಾ ಬದ್ಧವಾಗಿರುತ್ತೇವೆ. ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸ್ಥಳೀಯ ಜನರ ಸಹಕಾರ ಅಗತ್ಯ” ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ನಾರಾಯಣಪ್ಪ, ಜಿ.ಪಂ ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್, ಮುಖಂಡರಾದ ರಾಮಕೃಷ್ಣರೆಡ್ಡಿ, ಸುಧಾಕರ್, ನಾಗೇಂದ್ರ, ನಂಜುಂಡಪ್ಪ, ಶಿವಶಂಕರ್, ಶರತ್, ಅಶ್ವತ್ಥರೆಡ್ಡಿ, ಪವನ್ ರೆಡ್ಡಿ, ರಾಮಚಂದ್ರರೆಡ್ಡಿ, ರತ್ನಕೇಶವರೆಡ್ಡಿ ಮತ್ತಿತರರು ಭಾಗವಹಿಸಿದ್ದರು.