24.9 C
Bengaluru
Saturday, February 28, 2026

ಕೆರೆ ಅಭಿವೃದ್ಧಿಗೆ ಕ್ರಮ: ಶಾಸಕ

- Advertisement -
- Advertisement -

Gauribidanur : ಗೌರಿಬಿದನೂರು ಬಳಿಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ (Minor Irrigation Department ) ವ್ಯಾಪ್ತಿಯ ಕಲ್ಲೂಡಿ ಕೆರೆಗೆ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ (KH Puttaswamy Gowda) ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಯ ಸಮಗ್ರ ಅಭಿವೃದ್ಧಿ ಕುರಿತು (Kalludi Lake development Meeting) ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು 75 ಹೆಕ್ಟೇರ್ ವಿಸ್ತೀರ್ಣ ಹಾಗೂ 5.5 ಕಿ.ಮೀ ಸುತ್ತಳತೆ ಹೊಂದಿರುವ ಈ ಕೆರೆಯು 55 ಎಂಸಿಎಫ್‌ಟಿ ನೀರನ್ನು ಶೇಖರಿಸಬಹುದಾದ ಸಾಮರ್ಥ್ಯ ಹೊಂದಿದೆ. ಈ ಕೆರೆಯ ಅಭಿವೃದ್ಧಿಗೆ ಈಗಾಗಲೇ ₹3 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ ಎಂದು ತಿಳಿಸಿ ಈ ಅನುದಾನದಲ್ಲಿ ಕೆರೆ ದುರಸ್ತಿಯ ಜೊತೆಗೆ ನಾಗರಿಕರು ವಾಯುವಿಹಾರಕ್ಕೆ ಬಳಸಬಹುದಾದ ವಾಕಿಂಗ್ ಟ್ರ್ಯಾಕ್, ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರಿನ ಸೌಲಭ್ಯಗಳ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲು ಸಣ್ಣ ನೀರಾವರಿ ವಿಭಾಗದ ಎಂಜಿನಿಯರ್ ಎಂ.ವಿ. ಶ್ರೀನಿವಾಸ್ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಎಂಜಿನಿಯರ್ ಎಂ.ವಿ. ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರು ಖಲೀಂಉಲ್ಲಾ, ಶ್ರೀಕಾಂತ್, ಅಭಿಯಂತರೆ ಧಾನಿಯಾ ಫೈರೋಜ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!