Gauribidanur : ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಕಸಾಪ (KaSaPa) ತಾಲ್ಲೂಕು ಘಟಕದ ವತಿಯಿಂದ ಬುಧವಾರ ಸಾಹಿತ್ಯ ಸಮ್ಮೇಳನ (Sahitya Samelana Priliminary Meeting) ಪೂರ್ವಭಾವಿ ಸಭೆ ಮತ್ತು ಆಹ್ವಾನ ಪತ್ರಿಕೆ (Invitation Inauguration) ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ “ಮೊಟ್ಟ ಮೊದಲ ಬಾರಿಗೆ ಡಿ.18ರಂದು ಗೌರಿಬಿದನೂರು ತಾಲ್ಲೂಕಿನ ಗಡಿಭಾಗ ಮತ್ತು ಐತಿಹಾಸಿಕ ಪ್ರಸಿದ್ಧ ತಾಣವಾಗಿರುವ ವಿದುರಾಶ್ವತ್ಥದಲ್ಲಿ ಕಸಾಪ ವತಿಯಿಂದ ಕಸಬಾ ಹೋಬಳಿ ಮಟ್ಟದ ಸಮ್ಮೇಳನ ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಸತ್ಯಾಗ್ರಹ ಪ್ರೌಢಶಾಲೆ ಮುಖ್ಯ ಶಿಕ್ಷಕ ಎನ್.ಆರ್.ಚಂದ್ರಶೇಖರ್ ರೆಡ್ಡಿ ಸಮ್ಮೇಳನದ ಅಧ್ಯಕ್ಷತೆವಹಿಸಲಿದ್ದು ತಾಲ್ಲೂಕಿನ ಎಲ್ಲ ಸಾಹಿತ್ಯಾಸಕ್ತರು ಮತ್ತು ಯುವ ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಟಿ.ನಂಜುಂಡಪ್ಪ, ಪದಾಧಿಕಾರಿಗಳಾದ ಎನ್.ಬಾಲಪ್ಪ, ಪ್ರವೀಣ್, ಕೆ.ವಿ.ಪ್ರಕಾಶ್, ಆರ್.ಶಿವಮೂರ್ತಿ, ಅಮೃತ್ ಕುಮಾರ್, ಕಲಾವಿದ ರಾಮಕೃಷ್ಣ, ನರಸಿಂಹರೆಡ್ಡಿ, ಶ್ರೀರಾಮಪ್ಪ ಸೇರಿದಂತೆ ಇತರರು ಇದ್ದರು.