ಜಿಲ್ಲೆಗೆ ಕಿತ್ತೂರು ಚನ್ನಮ್ಮ, ವಿಜಯ ಜ್ಯೋತಿ ರಥ

- Advertisement -
- Advertisement -

Gauribidanur : October 23 ರಿಂದ 25ರ ವರೆಗೆ ನಡೆಯುವ ಕಿತ್ತೂರು ಉತ್ಸವದ (Kittur Utsava) ಅಂಗವಾಗಿ ಆಗಮಿಸಿದ ಕಿತ್ತೂರು ಚನ್ನಮ್ಮ (Kittur Chennamma) , ವಿಜಯ ಜ್ಯೋತಿ (Viajaya Jyothi Ratha) ರಥವನ್ನು ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ತಹಶೀಲ್ದಾರ್ ಮಹೇಶ್ ಪತ್ರಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಪತ್ರಿ ಮಾತನಾಡಿ “ಕಿತ್ತೂರು ರಾಣಿ ಚನ್ನಮ್ಮ, ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ದಿನದ ನೆನಪಿಗಾಗಿ, 5 ದಿನ ಕಿತ್ತೂರಿನಲ್ಲಿ ನಡೆಯುವ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು. ಅಕ್ಟೋಬರ್ 23 ರಂದು ಗೌರಿಬಿದನೂರಿನಲ್ಲಿಯೂ ಕಿತ್ತೂರು ಚನ್ನಮ್ಮ, ವಿಜಯ ಜ್ಯೋತಿ ಕಾರ್ಯಕ್ರಮ ನಡೆಸಲಾಗುವುದು” ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತೆ ಡಿ.ಎಂ ಗೀತಾ, ನಗರಸಭೆ ಅಧ್ಯಕ್ಷ ಲಕ್ಷ್ಮಿ, ನಾರಾಯಣಪ್ಪ, ರಾಜ್‌ಕುಮಾರ್, ಮಂಜುಳಾ ರಾಮಾಂಜಿನಪ್ಪ, ರವಿ ಕುಮಾರ್, ಅಮರ್ ನಾರಾಯಣ, ಗಿರೀಶ್, ಶಿವಶಂಕರ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!