ಕೋಚಿಮುಲ್ ಆರೋಗ್ಯ ವಿಮೆ ಚೆಕ್ ವಿತರಣೆ

- Advertisement -
- Advertisement -

Gauribidanur ಗೌರಿಬಿದನೂರು ಕೋಚಿಮುಲ್ (Kochimul) ಹಾಲು ಒಕ್ಕೂಟದ ಉಪ ಕಚೇರಿಯಲ್ಲಿ ಗುರುವಾರ ಆಕಸ್ಮಿಕವಾಗಿ ಮರಣ ಹೊಂದಿದ ರಾಸುಗಳಿಗೆ ಸಂಬಂಧಿಸಿದಂತೆ ಆರೋಗ್ಯ ವಿಮೆಯಡಿಯಲ್ಲಿ (Health Insurance) ಸುಮಾರು 35 ರೈತರಿಗೆ ₹18 ಲಕ್ಷ ಹಾಗೂ ಒಕ್ಕೂಟದ ದತ್ತಿ ನಿಧಿಯಲ್ಲಿ 30 ಮಂದಿಗೆ ₹7.5 ಲಕ್ಷ ಸಹಾಯಧನದ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಕೃಷಿ ಚಟುವಟಿಕೆಯ ಜತೆಗೆ ಹೈನುಗಾರಿಕೆಯ ಮೇಲೆ ಅವಲಂಬಿತವಾಗಿರುವ ರೈತರ ಮನೆಯಲ್ಲಿ ರಾಸುಗಳು ಅಕಾಲಿಕವಾಗಿ ಮರಣ ಹೊಂದಿದಲ್ಲಿ ನಷ್ಟ ಅನುಭವಿಸಬೇಕಾಗಿತ್ತದೆ. ಆದ್ದರಿಂದ ಪ್ರತೀ ಹೈನುದಾರರು ಕಡ್ಡಾಯವಾಗಿ ಮನೆಯಲ್ಲಿನ ರಾಸುಗಳಿಗೆ ಆರೋಗ್ಯ ವಿಮೆ ಮಾಡಿಸಬೇಕಾಗುತ್ತದೆ. ಇದರಿಂದಾಗಿ ಆಪತ್ಕಾಲದಲ್ಲಿ ಕುಟುಂಬಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.

ಒಕ್ಕೂಟದ ‌ನಿರ್ದೇಶಕಿ ಸುನಂದಮ್ಮ, ಉಪ ವ್ಯವಸ್ಥಾಪಕ ಡಾ.ನರೇಂದ್ರ, ವಿಸ್ತರಣಾಧಿಕಾರಿ ಸಚಿನ್, ಕಿರಣ್, ನವೀನ್, ರವಿಚಂದ್ರ, ಸುಕನ್ಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!