23.2 C
Bengaluru
Monday, February 16, 2026

ಕಾಂಗ್ರೆಸ್ ತೆಕ್ಕೆಗೆ ಮೇಳ್ಯ ಗ್ರಾ.ಪಂ

- Advertisement -
- Advertisement -

Gauribidanur : ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿ ಮೆಳ್ಯ ಗ್ರಾ.ಪಂ.ಗೆ (Melya Gram Panchayat) ಸೋಮವಾರ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್ ಬೆಂಬಲಿತ ರತ್ನಮ್ಮ ಅಧ್ಯಕ್ಷೆ, ರಾಮಲಕ್ಷ್ಮಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಮತ್ತು ತಿಮ್ಮಕ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಗಂಗಾಧರಯ್ಯ ಮತ್ತು ರಾಮಲಕ್ಷ್ಮಮ್ಮ ಸೇರಿದಂತೆ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದು ಒಟ್ಟು 16 ಮಂದಿ ಸದಸ್ಯರ ಬಲದಲ್ಲಿ ಕಾಂಗ್ರೆಸ್ ‌ಬೆಂಬಲಿತ ರತ್ನಮ್ಮ 11 ಹಾಗೂ ರಾಮಲಕ್ಷ್ಮಮ್ಮ 11 ಮತ ಪಡೆಯುವ ಮೂಲಕ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಮಂಜುನಾಥ್ ತಿಳಿಸಿದರು.

ಚುನಾವಣಾ ಸಮಾರಂಭದಲ್ಲಿ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಜೀಲಕುಂಟೆ ಗಂಗಾಧರಪ್ಪ, ಎಚ್.ಆರ್.ನಾಗರಾಜ್, ಎಂ.ಎ.ನಾಗರಾಜ್, ಡಿ.ಆಂಜಿನಪ್ಪ, ನಾಗಭೂಷಣರೆಡ್ಡಿ, ಹನುಮಂತರೆಡ್ಡಿ, ಅಂಜನಾರೆಡ್ಡಿ, ಪಿಡಿಒ ನಾರಾಯಣಸ್ವಾಮಿ, ಕಾರ ವಸೂಲಿಗಾರ ಅಶ್ವಥ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!