Gauribidanur : ಗೌರಿಬಿದನೂರು ನಗರದ ಹೊರವಲಯದ ಕೋಚಿಮುಲ್ (Kochimul) ಉಪಘಟಕದ ಬಳಿ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ(milk price reduction) ನಿರ್ಧಾರ ವಿರೋಧಿಸಿ ಹಾಲು ಉತ್ಪಾದಕರ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ವೇಳೆ ರೈತರ (farmers) ಬೆಂಬಲಿಗ ಸಂಘಟನೆಗಳ ಸದಸ್ಯರು, ಕನ್ನಡ ಬಾಂಧವರು, ಸ್ತ್ರೀಶಕ್ತಿ ಸಂಘಗಳು ಮತ್ತಿತರರು ಮಿನಿ ವಿಧಾನಸೌಧದಿಂದ ಕೋಚಿಮುಲ್ ಉಪವಿಭಾಗದವರೆಗೆ ಜಾನುವಾರುಗಳ ಸಮೇತ ಮೆರವಣಿಗೆ ನಡೆಸಿ, ರಸ್ತೆ ತಡೆದು ನಂತರ ಉಪ ಘಟಕದ ಕಚೇರಿಯನ್ನು ಆಕ್ರಮಿಸಿ ಧರಣಿ ಸತ್ಯಾಗ್ರಹ (Protest) ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿ.ಎನ್.ವೆಂಕಟರೆಡ್ಡಿ, ಮಳೆ ಅಭಾವ ಹಾಗೂ ಅತಿಯಾದ ಬಿಸಿಲಿನಿಂದ ಬೆಳೆ ಹಾನಿಯಿಂದ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ತಿಳಿಸಿದರು. ಹಾಲು ಒಕ್ಕೂಟವು ಹಾಲಿನ ದರವನ್ನು ಲೀಟರ್‌ಗೆ ₹ 2.50 ಕಡಿಮೆ ಮಾಡಿರುವುದರಿಂದ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ರೈತರ ಮೇಲೆ ಪರಿಣಾಮ ಬೀರಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿ.ಎಲ್.ಅಶ್ವತ್ಥನಾರಾಯಣ, ಪ್ರಭಾಕರ್, ಮಾಳಪ್ಪ, ಮಂಜುನಾಥ ರೆಡ್ಡಿ, ಎಂ.ಆರ್.ಲಕ್ಷ್ಮೀನಾರಾಯಣ, ಎಂ.ಎಸ್.ರಾಜಶೇಖರ್, ರವಿ, ಆರ್.ಎನ್.ರಾಜು, ತಾರಾನಾಥ್, ಲಕ್ಷ್ಮಿ, ರತ್ನರಾಜು, ಪ್ರಭು, ದೇವ್, ಪ್ರಕಾಶ್, ಲಕ್ಷ್ಮೀದೇವಮ್ಮ, ಆಗ್ನೆಸ್, ಮಹದೇವ್, ಅರುಣ್, ಚರಣ್ ಮುಂತಾದವರು ಪಾಲ್ಗೊಂಡಿದ್ದರು.