Gauribidanur : ಗೌರಿಬಿದನೂರು ತಾಲ್ಲೂಕಿನ ನಗರಗೆರೆ (Nagaragere) ಹೋಬಳಿಯ ಮಟ್ಟಾವಲಹಳ್ಳಿ ಗ್ರಾಮದಿಂದ ಬಂದಾರ್ಲಹಳ್ಳಿ ಗ್ರಾಮಕ್ಕೆ ಹಾಗೂ ಮಟ್ಟಾವಲಹಳ್ಳಿ ಗ್ರಾಮದಿಂದ ನರಸಿಂಹರೆಡ್ಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ₹2 ಕೋಟಿ ವೆಚ್ಚದ ಸಿ.ಸಿ.ರಸ್ತೆ (CC Road) ಕಾಮಗಾರಿಗೆ (Work) ಚಾಲನೆ ನೀಡಲಾಯಿತು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ “ನಗರಗೆರೆ ಹೋಬಳಿ ಭಾಗದಲ್ಲಿನ ರಸ್ತೆಗಳು ಹದೆಗೆಟ್ಟಿದ್ದು ಈ ರಸ್ತೆಗೆ ₹6 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಆರ್.ಆರ್.ರೆಡ್ಡಿ, ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ರಾಮಾಂಜಿನಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಮಹೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಗುತ್ತಿಗೆದಾರರಾದ ದಯಾನಂದ್, ಮುಖಂಡರಾದ ನಾಗೇಂದ್ರ, ವೆಂಕಟ ರೆಡ್ಡಿ, ನವೀನ್ ಕುಮಾರ್, ಗಂಗಾಧರಪ್ಪ ಡಿ.ಎನ್., ವಿಜಯಕುಮಾರ್, ನಾರಾಯಣ ಸ್ವಾಮಿ, ಆದಿನಾರಾಯಣಪ್ಪ ಭಾಗವಹಿಸಿದ್ದರು.