25 C
Bengaluru
Wednesday, December 4, 2024

ಆಹಾರ ಧಾನ್ಯ ಅಕ್ರಮ ಸಾಗಾಟ: ಗ್ರಾಮಸ್ಥರ ಆರೋಪ

- Advertisement -
- Advertisement -

Gauribidanur :VSSNನಲ್ಲಿ ಬಡವರಿಗೆ ನೀಡುವ ಪಡಿತರ ಆಹಾರ ಧಾನ್ಯವನ್ನು ವಿಎಸ್ಎಸ್ಎನ್ ಅಧ್ಯಕ್ಷ (VSSN President) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು (Namgondlu) ಗ್ರಾಮಸ್ಥರು ವಿರುದ್ಧ ಪ್ರತಿಭಟನೆ (protest) ನಡೆಸಿದರು.

ಪ್ರತಿ ತಿಂಗಳು ಸ್ಥಳೀಯ ವಿಎಸ್ಎಸ್ಎನ್‌ನಿಂದ ಪಡಿತರ ಕಾರ್ಡ್‌ದಾರರಿಗೆ ಉಚಿತವಾಗಿ ನೀಡುವ ಆಹಾರ ಧಾನ್ಯವನ್ನು ಅಧ್ಯಕ್ಷ ಎನ್.ಕೆ‌.ಗಂಗಪ್ಪ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಇದಕ್ಕೆ ವಿಎಸ್ಎಸ್ಎನ್‌ ಕಾರ್ಯದರ್ಶಿ ಸಹಕಾರವಿದೆ. ಜತೆಗೆ ಪ್ರತಿ ತಿಂಗಳು ಪಡಿತರದಾರರಿಂದ ಕಾರ್ಯದರ್ಶಿ ಆಹಾರ ಧಾನ್ಯವನ್ನು ವಿತರಣೆ ಮಾಡಲು ₹10 ಹಣ ಪಡೆಯುತ್ತಾರೆ. ಧಾನ್ಯಗಳು ಸರಬರಾಜಾಗುವ ಖಾಲಿ ಚೀಲಗಳನ್ನು ಸ್ಥಳೀಯ ಆಡಳಿತ ಮಂಡಳಿ ಗಮನಕ್ಕೆ ಬರದಂತೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವುದನ್ನು ಸಂಘದ ನಿರ್ದೇಶಕರು ಪ್ರಶ್ನಿಸಿದರೆ ಸಮಂಜಸ ಉತ್ತರ ನೀಡುತ್ತಿಲ್ಲ ಎಂದು ರೈತ ಸಂಘದ ಮುಖಂಡ ನರಸಿಂಹರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಎಸ್ಎಸ್ಎನ್‌ ನಿರ್ದೇಶಕ ಸುಬ್ರಹ್ಮಣ್ಯ, ನಾಗರಾಜ್, ಸುಬ್ರಹ್ಮಣ್ಯ, ನರಸಿಂಹಮೂರ್ತಿ, ಕೇಶವರೆಡ್ಡಿ, ಬಾಬುರೆಡ್ಡಿ, ರಾಮಚಂದ್ರ, ಸಾಗರ್, ನಾರಾಯಣಪ್ಪ, ಕೃಷ್ಣಾರೆಡ್ಡಿ, ನರಸಿಂಹರೆಡ್ಡಿ, ಮುನಿವೆಂಕಟಪ್ಪ, ಹನುಮಂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!