Gauribidanur : ಗೌರಿಬಿದನೂರು ನಗರದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವ ಸಂಘ ಭಾನುವಾರ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮವು ಮಾರಾಟ ಮೇಳವಾಗಿದ್ದು, ಜನರು ತಿಂಡಿ ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಬಹುದು (Sale and Snacks fare). ಬೆಳಗ್ಗೆ 10 ಗಂಟೆಗೆ ಆರಂಭವಾಗಿ ರಾತ್ರಿ 10ರವರೆಗೆ ನಡೆಯಿತು.
ಮೇಳದಲ್ಲಿ ವಾಸವಿ ಸಂಘದ ಮಹಿಳೆಯರು ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಗಳನ್ನು ಪ್ರದರ್ಶಿಸಿದರು.
ಸಂಜೆ 4 ಗಂಟೆಗೆ ತಿಂಡಿ ಮೇಳ ಆರಂಭಗೊಂಡಿದ್ದು, ಖಾದ್ಯ ಪ್ರಿಯರನ್ನು ಆಕರ್ಷಿಸಿತು. ನೂರಾರು ಬಗೆಯ ತಿಂಡಿ ತಿನಿಸುಗಳು ಲಭ್ಯವಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಜನರು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡು ನಾನಾ ಬಗೆಯ ರುಚಿಕರ ತಿಂಡಿ ತಿನಿಸುಗಳನ್ನು ಸವಿದರು. ಕರಿದ ತಿಂಡಿ ಮತ್ತು ಚಾಟ್ಸ್‌ಗಳಲ್ಲಿ ನೂತನ ಪ್ರಯೋಗದೊಂದಿಗೆ ಅನೇಕ ತಿಂಡಿಗಳು ಸಿದ್ಧಗೊಳಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಾಸವಿ ಯುವತಿ ಸಂಘದ ಅಧ್ಯಕ್ಷೆ ವಸುಪ್ರಭಾ ಮನೋಹರ್ ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ವಿನೂತನ ಆಹಾರ ಮತ್ತು ಕರಕುಶಲ ಮೇಳವನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಸವಿ ಯುವತಿ ಸಂಘದ ಕಾರ್ಯದರ್ಶಿ ಕಮಲ್ ನಟರಾಜ್, ಖಜಾಂಚಿ ತೇಜಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.