Gauribidanur : ಗೌರಿಬಿದನೂರು ನಗರದ ಹೊರವಲದಲ್ಲಿರುವ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲ ಸಂಘ, ಶಿಕ್ಷಣ ಇಲಾಖೆ ಅರೋಗ್ಯ ಇಲಾಖೆ ಸಹಯೋಗದಲ್ಲಿ ಸಂಘಟಿತ ಕಾರ್ಮಿಕರು ಹೊರಗುತ್ತಿಗೆ ಮತ್ತು ಕಾರ್ಮಿಕರಿಗೆ ಒಂದು ದಿನ ಕಾರ್ಯಗಾರ ಮತ್ತು ಹಿರಿಯ ನಾಗರಿಕರ ದಿನಾಚರಣೆಯನ್ನು (Senior Citizen Day) ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಧೀಶ ಪಿ ಎಂ,ಸಚಿನ್ “ಎಲ್ಲರಿಗೂ ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಪ್ರಾಧಿಕಾರ ಪ್ರತಿ 3 ತಿಂಗಳಿಗೊಮ್ಮೆ ಲೋಕ್ ಅದಾಲತ್ ಮೂಲಕ ಹಲವು ಕಾನೂನಾತ್ಮಕ ಸಮಸ್ಯೆಗಳನ್ನು ರಾಜಿ ಸಂಧಾನದ ಮೂಲಕ ಸ್ಥಳದಲ್ಲೇ ಬಗೆಹರಿಸುತ್ತದೆ. ಬಡವರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ಉಚಿತ ಕಾನೂನು ಸೇವೆ ನೀಡಲಾಗುವುದು. ಸರ್ಕಾರದಿಂದ ನೀಡಲಾಗುವ ಕಾನೂನು ಅರಿವು ಕಾರ್ಯಕ್ರಮಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು” ಎಂದು ತಿಳಿಸಿದರು.
ತಹಶೀಲ್ದಾರ್ ಮಹೇಶ್ ಪತ್ರಿ ,ಬಿಇಒ ಶ್ರೀನಿವಾಸಮೂರ್ತಿ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಶಬಾನಾ ಅಜ್ಮಿ, ಸರ್ಕಾರಿ ಅಭಿಯೋಜಕ ಪಯಾಜ್ ಪಟೀಲ್, ಕಾರ್ಖಾನೆ ಉಪ ನಿರ್ದೇಶಕ ಸೋಮಶೇಖರ್, ವಕೀಲರಾದ ಲಕ್ಷ್ಮೀನಾರಾಯಣ, ಜಗದೀಶ್, ಕಾರ್ಯದರ್ಶಿ ದಯಾನಂದ್, ಕಾರ್ಖಾನೆಗಳ ಉಪನಿರ್ದೇಶಕ ಸೋಮಶೇಖರ್, ಕಾರ್ಮಿಕ ರಾಜ್ಯ ವಿಮಾ ಯೋಜನೆ ಅಧಿಕಾರಿ ಪ್ರಭುಕುಮಾರ್, ಬಸವ ಪ್ರಭು, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.