Gauribidanur : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ಮೂಲಕ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಕಾಮರೆಡ್ಡಿಹಳ್ಳಿ (Manchenahalli Kamareddyhalli Lake) ಕೆರೆಯನ್ನು ಪುನಶ್ಚೇತನಗೊಳಿಸಿದ ಬಳಿಕ ಸ್ಥಳೀಯರಿಗೆ ಹಸ್ತಾಂತರ ಮಾಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೇವಲ ಆರ್ಥಿಕ ಸಹಕಾರವಲ್ಲದೆ ಕೆರೆಗಳ ಪುನಶ್ಚೇತನ, ಶೈಕ್ಷಣಿಕ ಪ್ರಗತಿಗೆ ಸಹಕಾರ, ಅರಣ್ಯೀಕರಣ, ವಾತ್ಸಲ್ಯ ಕಿಟ್ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುವಂತಹದ್ದು . ಸಮಾಜ ಹಾಗೂ ಪ್ರಾಕೃತಿಕವಾಗಿ ಸಾಕಷ್ಟು ಕಾಳಜಿಯನ್ನಿಟ್ಟು ನಿರಂತರವಾಗಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವು ಅರ್ಥಪೂರ್ಣ. ಎಂದು ಕೆರೆ ಪುನಶ್ಚೇತನ ಸಮಿತಿ ಅಧ್ಯಕ್ಷ ಸುದರ್ಶನರೆಡ್ಡಿ ತಿಳಿಸಿದರು.
ಜಿಲ್ಲಾ ಜಾಗೃತಿ ವೇದಿಕೆ ಸದಸ್ಯ ಮೋಹನ್, ಕೆ.ಪ್ರಭಾನಾರಾಯಣ ಗೌಡ, ಗಂಗೇಗೌಡ, ಲಕ್ಷ್ಮಿಪತಿ, ಯೋಜನಾಧಿಕಾರಿ ಕಲ್ಮೇಶ್, ನಾಗರಾಜ್, ನಾರಾಯಣಗೌಡ, ನರಸಿಂಹಪ್ಪ, ಗಂಗಾಧರಪ್ಪ, ರೂಪ, ಪಾರ್ವತಮ್ಮ, ಅರ್ಚಕ ಶರ್ಮ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಅಮೂಲ್ಯ, ಮೇಲ್ವಿಚಾರಕ ರಾಕೇಶ್, ಹರ್ಷ, ಚೈತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.