Gauribidanur : ಗೌರಿಬಿದನೂರು ನಗರದ ಸಮಾನತಾ ಸೌಧದಲ್ಲಿ ಭಾನುವಾರ ಕ್ರಿ ಆಕ್ಟಿವ್ ಸಂಸ್ಥೆ ವತಿಯಿಂದ ವಿಜ್ಞಾನೋತ್ಸವ (Vignanotsava) ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಪತ್ರಿ ಮಾತನಾಡಿ “ವಿದ್ಯಾರ್ಥಿಗಳು ಮೊಬೈಲ್ ಸಹವಾಸ ಬಿಟ್ಟು ಪುಸ್ತಕ ಓದುವದರಿಂದ ಜ್ಙಾನ ವೃದ್ಧಿಯಾಗುತ್ತದೆ” ಎಂದು ತಿಳಿಸಿದರು.
ಕ್ರಿ ಆಕ್ಟಿವ್ ಮುಖ್ಯಸ್ಥೆ ಸುಪ್ರಿಯಾ ಮಾತನಾಡಿದರು. ಇಸ್ರೋ ವಿಜ್ಞಾನಿ ಶ್ರೀನಾಥ್ ರತ್ನಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.