Gowribidanur : ತುಮಕೂರು ಕಡೆಯಿಂದ ಸೋಮವಾರ ರಾತ್ರಿ ಗೌರಿಬಿದನೂರು ಕಡೆ ಬರುತ್ತಿದ್ದ ಲಾರಿ ಉಪ್ಪಾರ ಕಾಲೊನಿ ಬಳಿಯ ಮೇಲ್ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ (Lorry Accident) ಉರುಳಿದೆ.
ಸೇತುವೆಯಲ್ಲಿ ಬರುವಾಗ ಎದುರಿಗೆ ಬರುತ್ತಿದ್ದ ಕಾರಿಗೆ ಲಾರಿ ತಾಕಿದ್ದು ಚಾಲಕ ಗಾಬರಿಯಿಂದ ಮತ್ತಷ್ಟು ವೇಗವಾಗಿ ಲಾರಿ ಚಲಾಯಿಸಿದ್ದ ಪರಿಣಾಮ ಲಾರಿ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಉರುಳಿ ಸೇತುವೆ ಕೆಳಗೆ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ.
ಅಪಘಾತದಿಂದ ಸೇತುವೆಗೆ ಅಳವಡಿಸಿದ್ದ ವಿದ್ಯುತ್ ಕಂಬಗಳು ಮುರಿದಿದ್ದು ಸೇತುವೆ ಕೆಳಗೆ ನಿಂತಿದ್ದ ಕಾರು ಪೂರ್ಣ ಜಖಂ ಆಗಿದೆ. ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದ್ದು ಸೇತುವೆ ಕೆಳಗೆ ಕಾರಿನಲ್ಲಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.