Gudibande : ಅಸಮರ್ಪಕ ಸಾರಿಗೆ ಹಾಗೂ ಬಸ್ ಡಿಪೊ (Bus Depot) ನಿರ್ಮಾಣಕ್ಕೆ ಒತ್ತಾಯಿಸಿ ಗುಡಿಬಂಡೆ ತಾಲ್ಲೂಕು ಸಾರಿಗೆ ಹೋರಾಟ ಸಮಿತಿ ಬುಧವಾರ ಗುಡಿಬಂಡೆ ಬಂದ್ (Bundh) ಗೆ ಕರೆ ನೀಡಿದ್ದು ಈ ಬಂದ್ ಯಶಸ್ವಿಯಾಗಿದೆ. ದಲಿತಪರ ಸಂಘಟನೆಗಳು, ಕನ್ನಡಪರ, ಪ್ರಗತಿ ಪರ ಸಂಘಟನೆಗಳು, ಶಾಲಾ ಕಾಲೇಜು, ಆಟೊ ಚಾಲಕರು, ರೈತ ಸಂಘಟನೆಗಳು, ಸರ್ಕಾರಿ ನೌಕರರು, ವಕೀಲರ ಸಂಘ ಬಂದ್ (Protest) ಗೆ ಬೆಂಬಲ ನೀಡಿದ್ದವು. ಅಂಗಡಿ ಮುಂಗಟ್ಟುಗಳನ್ನೂ ಸ್ವಯಂಪ್ರೇರಿತರಾಗಿ ಬೀಗ ಹಾಕುವ ಮೂಲಕ ವ್ಯಾಪರಸ್ಥರು ಬಂದ್ (Strike) ಗೆ ಬೆಂಬಲ ನೀಡಿದ್ದರು.
ಪ್ರತಿಭಟನ ಸ್ಥಳಕ್ಕೆ ಧಾವಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S.N. SubbaReddy) “ವಿಧಾನಸೌಧ ಕಲಾಪದಲ್ಲಿ ಬಸ್ ಡಿಪೊ ನಿರ್ಮಾಣಕ್ಕಾಗಿ 12 ಸಲ ಪ್ರಸ್ತಾವ ಮಾಡಿದ್ದು, ಗುಡಿಬಂಡೆ ವ್ಯಾಪ್ತಿಯಲ್ಲಿ ಸಾರಿಗೆ ವ್ಯವಸ್ಥೆ ಸರಿಪಡಿಸಲು ಡಿಪೊ ಅಗತ್ಯವಾಗಿದ್ದು ಸರ್ಕಾರ ಬಸ್ ಡಿಪೋ ನಿರ್ಮಾಣಕ್ಕೆ ಅನುಮತಿ ನೀಡುವ ತನಕ ಹೋರಾಟಕ್ಕೆ ನನ್ನ ಬೆಂಬಲವಿದೆ. ಈ ಕುರಿತು ಸಾರಿಗೆ ಸಚಿವರಿಗೆ (Minister of Transport of Karnataka) ಮನವರಿಕೆ ಮಾಡಲಾಗುವುದು” ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಾರಿಗೆ ನಿಯಂತ್ರಕ ಹಿಮರ್ವಧನ ನಾಯ್ಡು ಸ್ಥಳಕ್ಕೆ ಆಗಮಿಸಿದರು.