Gudibande : ಗುಡಿಬಂಡೆ ಕಸಬಾ ಪ್ರಾಥಮಿಕ ಪತ್ತಿನ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ (Farmers’ Association Directors Election) ಭಾನುವಾರ ನಡೆದ ಚುನಾವಣೆಯಲ್ಲಿ ರೈತ ಸಂಘ ಬೆಂಬಲಿತ 4 ಹಾಗೂ ಕಾಂಗ್ರೆಸ್ ಬೆಂಬಲಿತ 5 ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಷಾಂಸ್ ಪರವೇಷ್ ಘೋಷಿಸಿದರು.
ಒಟ್ಟು 12 ಸ್ಥಾನಗಳಿದ್ದು ಮೂರು ಸ್ಥಾನಗಳಿಗೆ ಈ ಹಿಂದೆಯೇ ಅವಿರೋಧ ಆಯ್ಕೆ ನಡೆದಿತ್ತು. ಗುಡಿಬಂಡೆ ಸಾಲಗಾರರ ಕ್ಷೆತ್ರದಿಂದ ಜಿ.ವಿ.ಗಂಗಪ್ಪ, ಪುಲವಮಾಕಲಹಳ್ಳಿ ಕ್ಷೇತ್ರದಿಂದ ಜಾಕೀರ್ ಹುಸೇನ್, ಕರಿಗಾನತಮ್ಮನಹಳ್ಳಿ ಸಾಲಗಾರರಲ್ಲದ ಕ್ಷೇತ್ರದಿಂದ ರಾಜಾರೆಡ್ಡಿ ಕೆ.ಎ ಅವಿರೋಧ ಆಯ್ಕೆ ಆಗಿದ್ದರು.
ಬ್ರಾಹ್ಮಣರಹಳ್ಳಿ ಸಾಮಾನ್ಯ ಕ್ಷೇತ್ರದಿಂದ ವೆಂಕಟಾಚಲಪತಿ, ಪುಲವಮಾಕಲಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಸುರೇಂದ್ರ ರೆಡ್ಡಿ ಪಿ.ಎಸ್., ಯಲಕರಾಳ್ಳಹಳ್ಳಿ ಸಾಮಾನ್ಯ ಕ್ಷೇತ್ರದಿಂದ ನರಸಿಂಹಮೂರ್ತಿ ವೈ.ಡಿ., ಅಲಗದರೇನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಶ್ರೀನಿವಾಸ್ ಎಚ್.ಎ., ಗುಡಿಬಂಡೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಆದಿನಾರಾಯಣಪ್ಪ, ಹಿಂದುಳಿದ ವರ್ಗ ‘ಬಿ’ ಕ್ಷೇತ್ರ ಹಳೇಗುಡಿಬಂಡೆ ಕ್ಷೇತ್ರದಿಂದ ರಾಮನಾಥ್ ಎಚ್.ಪಿ., ಮಾಚಮಲಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಶಾಂತಮ್ಮ, ಗುಡಿಬಂಡೆ ಮಹಿಳಾ ಮೀಸಲು ಕ್ಷೇತ್ರದಿಂದ ಅರುಣಾಕುಮಾರಿ ಬಿ. ಮತ್ತು ಠೇವಣಿದಾರರ ಕ್ಷೇತ್ರದಿಂದ ಮಂಜುನಾಥರೆಡ್ಡಿ ಎಚ್.ಎನ್. ಆಯ್ಕೆಯಾದರು.