Gudibande : ಗುರುವಾರ ಸಂಜೆ ಗುಡಿಬಂಡೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ (Ganesha Festival) ಪ್ರಯುಕ್ತ ಶಾಂತಿ ಸಭೆ (Peace Meeting) ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ರಕ್ಷಕ ಉಪ ನಿರೀಕ್ಷಕ ಮಂಜುನಾಥ್ “ಗಣೇಶ ಹಬ್ಬವನ್ನು ಸರಳ ಹಾಗೂ ಶಾಂತಿಯುತವಾಗಿ 3 ದಿನಗಳ ಕಾಲ ಆಚರಣೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಸರ್ಕಾರದ ಆದೇಶದ ವಿರುದ್ಧವಾಗಿ ನಡೆದುಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಿಬಂಧನೆಗೆ ಒಳಪಟ್ಟು ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟಿಕರಿಂದ ಇಂಡೆಮಿನಿಟಿ ಬಾಂಡ್ (Indemnity Bond) ಬರೆಸಿಕೊಳ್ಳಲಾಗುತ್ತದೆ” ಎಂದು ಹೇಳಿದರು.
ಆರಕ್ಷಕ ಉಪ ನಿರೀಕ್ಷಕರಾದ ನಾಗರಾಜು, ಜಯರಾಮ್, ಪ.ಪಂ.ಮುಖ್ಯಾಧಿಕಾರಿ ರಾಜಶೇಖರ, ಉಪಾಧ್ಯಕ್ಷ ಅನಿಲ್ ಕುಮಾರ್, ಪಿ.ಡಿ.ಒಗಳಾದ ರಾಮಾಂಜಿ, ಮಮತ, ಶ್ರೀನಿವಾಸ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.