Gudibande : ಗುಡಿಬಂಡೆ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಪ್ರಾದೇಶಿಕ ಸಭೆ (Regional Meeting)ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ (Kochimul) ಶುಕ್ರವಾರ ಗುಡಿಬಂಡೆ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಹಾಲು ಉತ್ಪಾದಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಲೀಟರ್ ಹಾಲಿನ ದರವನ್ನು ₹40ಕ್ಕೆ ಹೆಚ್ಚಿಸಲು ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುತ್ತದೆ ಎಂದು ಕೋಚಿಮಲ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಕೋಚಿಮಲ್ ಗುಡಿಬಂಡೆ ನಿರ್ದೇಶಕ ಆದಿನಾರಾಯಣರೆಡ್ಡಿ, ಕೋಚಿಮಲ್ ವಿಭಾಗದ ಉಪ ವ್ಯವಸ್ಥಾಪಕ ಡಾ.ಬಿ.ಹೆಚ್.ವೀರಭದ್ರರೆಡ್ಡಿ, ಗುಡಿಬಂಡೆ ಶಿಬಿರ ಕಛೇರಿ ಉಪ ವ್ಯವಸ್ಥಾಪಕಿ ಡಾ. ಎಂ.ಸಿ.ನವ್ಯಶ್ರೀ, ಡಾ.ಧರಣಿ ಕುಮಾರ್, ನರಸಿಂಹಯ್ಯ, ತಾಲ್ಲೂಕು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷ ವೆಂಕಟೇಶಪ್ಪ, ಚನ್ನಕೇಶರೆಡ್ಡಿ, ಬಾಲಕೃಷ್ಣಾರೆಡ್ಡಿ, ಎಂ.ವಿ.ಶಿವಣ್ಣ, ಮಂಜುನಾಥ, ಸೇರಿ 61 ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.