Gudibande : ಗುಡಿಬಂಡೆ ಪಟ್ಟಣದಲ್ಲಿ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಗಳ ಸಮಗ್ರ ಮಾಹಿತಿಯನ್ನೊಳಗೊಂಡ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಕೃಷಿ ಮಾಹಿತಿ ರಥ (Krishi Mahiti Ratha) ಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S.N. Subbareddy) ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು “ಬೆಳೆ ವಿಮಾ ಯೋಜನೆ (Pradhan Mantri fasal bima yojana) ಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬಳಸಿಕೊಳ್ಳಬೇಕು. ಸರ್ಕಾರ ಜಾರಿ ಮಾಡಿರುವ ಸರ್ಕಾರ ಹವಮಾನ ಆಧರಿತ ಬೆಳೆ ವಿಮಾ ಯೋಜನೆ (Weather Based Crop Insurance) ಯಿಂದ ರೈತರಿಗೆ ಅನುಕೂಲವಾಗಿದೆ. ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತ ಒಂದೇ ಬೆಳೆಯನ್ನು ನಂಬಿಕೊಳ್ಳದೇ, ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು” ಎಂದು ಹೇಳಿದರು.
ಉಪಕೃಷಿ ನಿರ್ದೇಶಕ ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ಅಮರನಾಥರೆಡ್ಡಿ, ತಾಂತ್ರಿಕ ಅಧಿಕಾರಿ ಎನ್.ಶಂಕರಯ್ಯ, ತೋಟಗಾರಿಕೆ ಇಲಾಖೆಯ ಕೃಷ್ಣಮೂರ್ತಿ, ದಿವಾಕರ್, ರವಿಕುಮಾರ್, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಮಾನಸ, ಅಶ್ವಿನಿ ಇದ್ದರು.