Gudibande : ಗುಡಿಬಂಡೆ ಪಟ್ಟಣದಲ್ಲಿ ಮಂಗಳವಾರ ಕಸಬಾ ಸಹಕಾರ ಸಂಘದ (Kasaba Sahakara Sangha) 2023-24ನೇ ಸಾಲಿನ ವಾರ್ಷಿಕ ಸಭೆ (Annual Meeting) ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಬಾಬಾ ಫಕೃದ್ದಿನ್ ಸಂಘದ ಅಯವ್ಯಯ ಮಂಡಿಸಿ ಅನುಮೋದನೆ ಪಡೆದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎಸ್.ಸುರೇಂದ್ರರೆಡ್ಡಿ ಮಾತನಾಡಿ “ಕಸಬಾ ಸಹಕಾರ ಸಂಘದಿಂದ ಕೃಷಿ ಸೇರಿದಂತೆ ವಿವಿಧ ಸಾಲ ನೀಡಿದ್ದು ಈ ಸಾಲಿನಲ್ಲಿ ₹2.90ಲಕ್ಷ ಲಾಭ ಬಂದಿದೆ. ಕೆಸಿಸಿ ಯೋಜನೆಯಲ್ಲಿ 354 ರೈತರಿಗೆ ಬಡ್ಡಿ ರಹಿತವಾಗಿ ₹3.8 ಕೋಟಿ ಕೃಷಿ ಸಾಲ ಹಾಗೂ ಎಸ್‌ಎಚ್‌ಜಿ ಯೋಜನೆಯಲ್ಲಿ 32 ಸ್ವಸಹಾಯ ಗುಂಪುಗಳಿಗೆ ₹1.38 ಕೋಟಿ ಸಾಲ ನೀಡಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಬ್ಯಾಂಕ್ ಮಾಜಿ ನಿರ್ದೇಶಕ ಎಚ್.ಎನ್.ಮಂಜುನಾಥರೆಡ್ಡಿ, ರೈತ ಮುಖಂಡ ಹಳೆಗುಡಿಬಂಡೆ ರಾಮನಾಥರೆಡ್ಡಿ, ಡಿಸಿಸಿ ಬ್ಯಾಂಕ್ ಗುಡಿಬಂಡೆ ಶಾಖಾ ವ್ಯವಸ್ಥಾಪಕಿ ಎ.ಅನ್ಸಾರಿ, ಕೆ.ಚಿದಾನಂದ, ಎಸ್.ವೆಂಕಟಾಚಲ ಪತಿ, ಅರ್.ರಾಜಪ್ಪ, ಜಿ.ಎಸ್.ಚಂದ್ರಶೇಖರ್, ಜಾಕೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.