ಮೊಹರಂ ಮೆರವಣಿಗೆ

- Advertisement -
- Advertisement -

Gudibande : ಗುಡಿಬಂಡೆ ಪಟ್ಟಣದ ಜಾಮಿಯಾ ಮಸೀದಿ ಬಳಿಯ ಬಾಬಯ್ಯ ಗುಡಿಯಿಂದ ಹಿಂದೂ ಮುಸ್ಲಿಮರು ಮೊಹರಂ ಅಂಗವಾಗಿ ಭಾನುವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ಶೋಕಾಚರಣೆ ಸಂಕೇತವಾಗಿ ಕಪ್ಪುಬಟ್ಟೆ ಧರಿಸಿ ಮೆರವಣಿಗೆ ನಡೆಸಿ (Muharram Procession) ದೇಹದಂಡನೆ ಮಾಡಿದರು.

ಮೆರವಣಿಗೆಗೆ ಮೊದಲು ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ವೇದಿಕೆ ಕಾರ್ಯಕ್ರಮದಲ್ಲಿ ಹಸೇನ್ ಹುಸೇನ್ ಬಗ್ಗೆ ಮತ್ತು ಮೊಹರಂ ಆಚರಣೆಗಳ ಬಗ್ಗೆ ವಿವಿಧ ಕಡೆಗಳಿಂದ ಬಂದಿದ್ದ ಧರ್ಮಗುರುಗಳು ಮಾಹಿತಿ ನೀಡಿದರು.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಅಲ್ಲಿಪುರದ ಅಂಜುಮನೆ ಜಾಫರೀಯಾ, ಅಲಿ ಅಬ್ಬಾಸ್, ಗುಲಾಮ್ ರಜಾ, ಉರ್ದು ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ನಾಥಿಕ್ ಅಲ್ಲಿಪುರಿ, ಮೌಲಾನಾ ಜಾಹೇದ್ ಅಹ್ಮದ್, ಜುಮ್ಮ ಜಮಾತ್ ಅಲ್ಲಿಪುರ್, ಮೌಲನಾ ಲುಕ್ಮಾನ್ ಹೌದರ್ ಪೋತೇನಹಳ್ಳಿ, ಅಂಜುಮನೆ ಹೈದರಿ ಪೋತೇನಹಳ್ಳಿ, ಮೊಹ್ಮದ್ ಅಕಿಲ್, ಅಲಿಜಾನ್, ಗುಡಿಬಂಡೆ ರಿಯಾಜ್ ಪಾಷ, ಮೊಹರಮ್ ಆಚರಣಾ ಸಮಿತಿ ಹಾಗೂ ಫಾತಿಮಾ ಆಚರಣಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!