Gudibande : ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ನಡವನಹಳ್ಳಿ (Nadavana Halli) F–13 ಲೈನ್‌ಗೆ BESCom ಸಿಬ್ಬಂದಿ ಹಾಗೂ ರೈತರು ಚಾಲನೆ (Inauguration) ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಪಿ. ಲಕ್ಷ್ಮಿನಾರಾಯಣ “ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಕೆಲವು ಹಳ್ಳಿಗಳ ಮೂಲಕ ಹಾದು ಹೋಗುವ ಎಫ್–13 ಲೈನ್ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಿದ್ದು ಇದರಿಂದ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಎಫ್–13 ಲೈನ್ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಪ್ರತಿಭಟನೆ ನಡೆಸುವ ಜೊತೆಗೆ ಈ ಸಂಬಂಧ ಶಾಸಕರಿಗೂ ಮನವಿ ಸಲ್ಲಿಸಲಾಗಿತ್ತು. ರೈತರ ಪ್ರತಿಭಟನೆಯಿಂದಾಗಿ ಎಚ್ಚೆತ್ತುಕೊಂಡ ಬೆಸ್ಕಾಂ ಅಧಿಕಾರಿಗಳು 10 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೋಲಂಪಲ್ಲಿ ಮಂಜುನಾಥ್ ರೆಡ್ಡಿ , ಬೊಮ್ಮಗಾನಹಳ್ಳಿ ಪೃಥ್ವಿ , ಚಿಕ್ಕತಮ್ಮನಹಳ್ಳಿ ಮಂಜುನಾಥ್, ಗಂಗಪ್ಪ, ಮನೋಜ್, ಗ್ಯಾದರಮಾಕಹಳ್ಳಿ ಗೋಪಾಲರೆಡ್ಡಿ, ಎ.ಎಚ್. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.