Gudibande : ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ಚಂಡೂರು ಗ್ರಾಮದಲ್ಲಿ ಬುಧವಾರ ₹ 37 ಲಕ್ಷದ ಅರ್ಯುವೇದ ಅಸ್ವತ್ರೆಯ (Ayurveda Hospital) ನೂತನ ಕಟ್ಟದ ಕಾಮಗಾರಿಗೆ (new construction) ಗುದ್ದಲಿ ಪೂಜೆ ನೇರವೇರಿಸಲಾಯಿತು.
ಕಾರ್ಯಕ್ರಾಮದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಇದೇ ಶನಿವಾರ ತಾಲ್ಲೂಕು ಕಚೇರಿಯ ಶಾಸಕರ ಕೊಠಡಿಯಲ್ಲಿ ಸಾರ್ವಜನಿಕರ ಜನತಾ ದರ್ಶನ ನಡೆಯಲಿದ್ದು ಸಾರ್ವಜನಿಕರು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಖುದ್ದಾಗಿ ನನ್ನ ಗಮನಕ್ಕೆ ತಂದರೆ, ತಕ್ಷಣವೇ ಅವುಗಳನ್ನು ಪರಿಹರಿಸಲಾಗುವುದು. ದಶಕಗಳಿಂದ ಗ್ರಾಮದಲ್ಲಿ ಅರ್ಯುವೇದ ಅಸ್ಪತ್ರೆ ಇದ್ದು ಕಟ್ಟಡ ಶಿಥಿಲವಾಗಿದ್ದು, ಗ್ರಾಮ ವಿಕಾಸ ಯೋಜನೆಯಲ್ಲಿ ಚಂಡೂರು ಗ್ರಾಮದಲ್ಲಿ ಅಸ್ಪತ್ರೆ, ರಸ್ತೆ, ಅಂಬೇಡ್ಕರ ಭವನ, ₹ 1 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮನಿಷಾ, ಇಒ ಹೇಮಾವತಿ, ಪಿಡಿಒ ನರಸಿಂಹಮೂರ್ತಿ, ಎಇಇ ಜಗದೀಶ, ಕೋಚಿಮಲ್ ನಿರ್ದೇಶಕ ಅದಿನಾರಾಯಣ ರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅದಿ ರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ, ಹಂಪಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷೆ ರಾಮಲಕ್ಷಮ್ಮ, ಮಂಜು, ವೇಣು, ಮೂರ್ತಿ,ಅನಂದ ರೆಡ್ಡಿ, ರಮಣ, ರಮೇಶ, ಕೆ.ಟಿ. ಅಶ್ವತ್ಥರೆಡ್ಡಿ, ನಾರಾಯಣಸ್ವಾಮಿ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.