Home News Gudibande ತಾಲ್ಲೂಕಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣಿ ಮಾಡಿಕೊಂಡು ಹೊರಡಿ : ಶಾಸಕ

ತಾಲ್ಲೂಕಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣಿ ಮಾಡಿಕೊಂಡು ಹೊರಡಿ : ಶಾಸಕ

0
397
Gudibande Panchayati General Meeting MLA S N Subbareddy

Gudibande : ಗುಡಿಬಂಡೆ ನಗರದ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಪಂಚಾಯಿತಿ ಸಾಮಾನ್ಯ ಸಭೆ (Panchayati General Meeting) ನಡೆಯಿತು. ಸಭೆಯಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ( S N Subbareddy) ಅವರು ಭಾಗವಹಿಸಿ, ಜನರ ಸಮಸ್ಯೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಸಬಾ ಶಿರಿನ್ ಮತ್ತು ಎಂಜಿಯರ್‌ ಚಕ್ರಪಾಣಿ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣಿ ಮಾಡಿಕೊಂಡು ಹೊರಡಿ ಎಂದು ಸೂಚಿಸಿ, ನಗರೋತ್ಥಾನ ಯೋಜನೆಗೆ ₹4 ಕೋಟಿ ಬಿಡುಗಡೆಯಾಗಿದ್ದು, ಇನ್ನೂ ಕಾಮಗಾರಿ ಮುಗಿದಿಲ್ಲ. ರಸ್ತೆಗಳೆಲ್ಲಾ ಹಾಳಾಗಿವೆ ಈ ಬಗ್ಗೆ ಮುಖ್ಯಾಧಿಕಾರಿ ಗಮನಹರಿಸಿ ಫೆಬ್ರುವರಿ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ್ದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಗೀನ್ ತಾಜ್, ಉಪಾಧ್ಯಕ್ಷ ವಿಕಾಸ, ಸದಸ್ಯರಾದ ರಾಜೇಶ, ಬಷೀರಾ, ವೀಣಾ, ರಾಜು, ರಾಜೇಶ, ಬಷೀರ್ ಅಹಮದ್, ಮಂಜುಳಾ, ಅನುಷಾ, ಇಸಮಾಯಿಲ್ ಅಜಾದ್, ಪ.ಪಂಚಾಯಿತಿ ಸಿಬ್ಬಂದಿ ಬಾಲಪ್ಪ, ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!